Home Kannada ಗೋವಿಂದಪುರ ಪೊಲೀಸರ ಭರ್ಜರಿ ಬೇಟೆ: ಅಂತಾರಾಷ್ಟ್ರೀಯ ಡ್ರಗ್ಸ್​​ ಪೆಡ್ಲರ್ ಬಂಧನ!

ಗೋವಿಂದಪುರ ಪೊಲೀಸರ ಭರ್ಜರಿ ಬೇಟೆ: ಅಂತಾರಾಷ್ಟ್ರೀಯ ಡ್ರಗ್ಸ್​​ ಪೆಡ್ಲರ್ ಬಂಧನ!

by akash

ಬೆಂಗಳೂರು: ಗೋವಿಂದಪುರ ಪೊಲೀಸರು ಕಾರ್ಯಾಚರಣೆ ನಡೆಸಿ ಅಂತಾರಾಷ್ಟ್ರೀಯ ಡ್ರಗ್ಸ್​​ ಪೆಡ್ಲರ್ ಒಬ್ಬನನ್ನು ಬಂಧಿಸಿದ್ದಾರೆ. ಬಂಧಿತನಿಂದ 2.64 ಲಕ್ಷ ಮೌಲ್ಯದ 10 ಗ್ರಾಂ ಕೊಕೇನ್ ಮತ್ತು 1.5 ಗ್ರಾಂ ಹೆರಾಯಿನ್​ ವಶಕ್ಕೆ ಪಡೆದಿದ್ದಾರೆ. ಕೃತ್ಯಕ್ಕೆ ಬಳಸುತ್ತಿದ್ದ ಮೊಬೈಲ್, ದ್ವಿಚಕ್ರ ವಾಹನ ಹಾಗೂ ಐನೂರು ನಗದು ವಶಕ್ಕೆ ಪಡೆದಿರುವ ಪೊಲೀಸರು, ಫೋಫನ ಚೇಯ್ಕನ (27) ಎಂಬಾತನನ್ನು ಬಂಧಿಸಿದ್ದಾರೆ. ಬಂಧಿತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ವೀಸಾ ಅವಧಿ ಮುಗಿದಿದ್ದರೂ ಅಕ್ರಮವಾಗಿ ಬೆಂಗಳೂರಿನಲ್ಲಿ ನೆಲೆಸಿದ್ದ ಆರೋಪಿ ಹಾಗೂ ಯಾವುದೇ ದಾಖಲಾತಿ ಪಡೆಯದೆ ಮನೆ ಬಾಡಿಗೆಗೆ ಕೊಟ್ಟಿದ್ದ ಮಾಲೀಕನ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದು, ಗೋವಿಂದಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

Related Posts

Leave a Comment