Home Kannada ಗ್ರಾಹಕನಿಗೆ ಮೆಸ್ಕಾಂ ವಿಜಿಲೆನ್ಸ್ ಅಧಿಕಾರಿಯಿಂದ ಹಲ್ಲೆ: ವಿಡಿಯೋ ವೈರಲ್

ಗ್ರಾಹಕನಿಗೆ ಮೆಸ್ಕಾಂ ವಿಜಿಲೆನ್ಸ್ ಅಧಿಕಾರಿಯಿಂದ ಹಲ್ಲೆ: ವಿಡಿಯೋ ವೈರಲ್

by Eha

ಮಂಗಳೂರು: ಮೆಸ್ಕಾಂ ವಿಜಿಲೆನ್ಸ್ ಅಧಿಕಾರಿಯೊಬ್ಬರು ಗ್ರಾಹಕರೋರ್ವರಿಗೆ ಸ್ಕೇಲ್​ನಲ್ಲಿ ಹಲ್ಲೆ ಮಾಡಿರುವ ಘಟನೆ ನಡೆದಿದೆ. ಗ್ರಾಹಕರ ಮೊಬೈಲ್​​ನಲ್ಲೇ ಹಲ್ಲೆ ನಡೆಸಿರುವ ದೃಶ್ಯ ಸೆರೆಯಾಗಿದೆ. ನಗರದ ಅತ್ತಾವರ ಮೆಸ್ಕಾಂ ವಿಭಾಗದಲ್ಲಿ ಪ್ರವೀಣ್ ಬಂಗೇರ ಎಂಬವರು ವಿಜಿಲೆನ್ಸ್ ಅಧಿಕಾರಿಯಾಗಿದ್ದು, ಅವರ ಬಳಿಗೆ ಬಂದ ಗ್ರಾಹಕರೋರ್ವರು ‘ತಮಗೆ ಕರೆ ಮಾಡಿದ್ದೆ, ಆದರೆ ತಾವು ಕರೆ ಎತ್ತಿಲ್ಲ’ ಎಂದು ಹೇಳಿದ್ದಾರೆ. ಈ ಸಂದರ್ಭ ಮಾತಿಗೆ ಮಾತು ಬೆಳೆದು ಗ್ರಾಹಕ ಏಕಾಏಕಿ ‘ಫೋನ್ ಕರೆ ಸ್ವೀಕರಿಸದ ತಮ್ಮನ್ನು ದೊಣ್ಣೆಯಿಂದ ಹೊಡೆಯಬೇಕು’ ಎಂದಿದ್ದಾರೆ. ಇದರಿಂದ ಕುಪಿತಗೊಂಡ ವಿಜಿಲೆನ್ಸ್ ಅಧಿಕಾರಿ ಅಲ್ಲೇ ಇದ್ದ ಸ್ಟೀಲ್ ಸ್ಕೇಲ್​ನಲ್ಲಿ ಗ್ರಾಹಕರಿಗೆ ನಾಲ್ಕೈದು ಏಟು ಹೊಡೆದಿದ್ದಾರೆ. ಅಲ್ಲದೆ ತಮಗೆ ತಾಕತ್ತಿದ್ದರೆ ದೊಣ್ಣೆಯಿಂದ ಹೊಡೆದು ನೋಡು’ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.ಇದೀಗ ಈ ವಿಡಿಯೋ ವೈರಲ್ ಆಗಿದೆ.

Related Posts

Leave a Comment