Home Kannada ಚಲಿಸುತ್ತಿದ್ದ ಬಸ್​​​​ನಿಂದ ಜಿಗಿದು ಮಾಜಿ ಸೈನಿಕ ಆತ್ಮಹತ್ಯೆ

ಚಲಿಸುತ್ತಿದ್ದ ಬಸ್​​​​ನಿಂದ ಜಿಗಿದು ಮಾಜಿ ಸೈನಿಕ ಆತ್ಮಹತ್ಯೆ

by Eha

ಚಿಕ್ಕೋಡಿ(ಬೆಳಗಾವಿ): ಮಾನಸಿಕ ಅಸ್ವಸ್ಥನಾಗಿದ್ದ ಮಾಜಿ ಸೈನಿಕರೊಬ್ಬರು ಚಲಿಸುತ್ತಿದ್ದ ಸಾರಿಗೆ ಬಸ್ಸಿನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಗೋಟುರ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ನಿಪ್ಪಾಣಿ ತಾಲೂಕಿನ ಹಂಚಿನಾಳ (ಕೆಎಸ್​) ನಿವಾಸಿ ಗೋಪಿನಾಥ್ ಜೋತಿರಾಮ ಜಾನವಾಡೆ (27) ಮಾಜಿ ಸೈನಿಕ. ಬೆಳಗಾವಿಯಿಂದ ಸಂಕೇಶ್ವರ ಮಾರ್ಗವಾಗಿ ನಿಪ್ಪಾಣಿ ಕಡೆ ಸಾರಿಗೆ ಬಸ್​​​​ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಗೋಟುರ ಗ್ರಾಮ ಸಮೀಪಿಸುತ್ತಿದ್ದಂತೆ ಏಕಾಏಕಿ ಬಸ್‌ನ ಹಿಂಬದಿಯ ಬಾಗಿಲು ತೆರೆದು ಜಿಗಿದಿದ್ದಾರೆ. ಇದೇ ವೇಳೆ, ಹಿಂದಿನಿಂದ ವೇಗವಾಗಿ ಬರುತ್ತಿದ್ದ ಇನ್ನೊಂದು ಸಾರಿಗೆ ಬಸ್‌ನ ಟೈಯರ್ ಅಡಿ ಸಿಲುಕಿ ತಲೆಗೆ ತೀವ್ರವಾದ ಏಟು ಬಿದ್ದಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮೃತ ಗೋಪಿನಾಥ್ ಜಾನವಾಡ ಮೂರು ವರ್ಷದ ಹಿಂದೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದು, ಮಾನಸಿಕ ಅಸ್ವಸ್ಥನಾದ ಬಳಿಕ ಸೇನೆಯಿಂದ ವಜಾಗೊಳಿಸಲಾಗಿತ್ತು. ಈ ಕುರಿತು ಸಂಕೇಶ್ವರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Posts

Leave a Comment