Home Kannada ಚಾಲಕನಿಗೆ ಮೂರ್ಛೆ ರೋಗ: ಕಸ ಸಂಗ್ರಹಿಸುವ ವಾಹನ ಡಿಕ್ಕಿಯಾಗಿ 8 ಬೈಕ್​​ಗಳು ಜಖಂ!

ಚಾಲಕನಿಗೆ ಮೂರ್ಛೆ ರೋಗ: ಕಸ ಸಂಗ್ರಹಿಸುವ ವಾಹನ ಡಿಕ್ಕಿಯಾಗಿ 8 ಬೈಕ್​​ಗಳು ಜಖಂ!

by akash

ಹುಬ್ಬಳ್ಳಿ: ‌ಕಸ ಸಂಗ್ರಹಿಸುವ ವಾಹನ ಡಿಕ್ಕಿಯಾಗಿ ಎಂಟು ಬೈಕ್​​ಗಳು ಜಖಂಗೊಂಡಿರುವ ಘಟನೆ ಹುಬ್ಬಳ್ಳಿಯ ಏರ್​ಪೋರ್ಟ್ ಮುಂಭಾಗದಲ್ಲಿ ‌ ನಡೆದಿದೆ. ಪಾಲಿಕೆ ವತಿಯಿಂದ ಕಸ ಸಂಗ್ರಹಿಸುವ ವಾಹನ ಚಾಲಕನಿಗೆ ಮೂರ್ಛೆ ಬಂದ ಪರಿಣಾಮ ವಿಮಾನ ನಿಲ್ದಾಣದ ರಸ್ತೆ ಪಕ್ಕದಲ್ಲಿ ನಿಂತಿದ್ದ ಬೈಕ್​ಗಳಿಗೆ ಡಿಕ್ಕಿ ಹೊಡೆದಿದ್ದಾನೆ. ಅಪಘಾತದಲ್ಲಿ 8 ಬೈಕ್​ಗಳು ಜಖಂಗೊಂಡಿದ್ದು,‌ ಯಾರಿಗೂ ಗಾಯಗಳಾಗಿಲ್ಲ. ಇದಕ್ಕೆ ಸಂಬಂಧಿಸಿದಂತೆ ಉತ್ತರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Posts

Leave a Comment