Home Kannada ಚಿಕ್ಕೋಡಿಯಲ್ಲಿ ಜ್ಯೋತಿ ಬಜಾರ್ ಸೀಲ್ ಮಾಡಿಸಿದ ಅಧಿಕಾರಿಗಳು

ಚಿಕ್ಕೋಡಿಯಲ್ಲಿ ಜ್ಯೋತಿ ಬಜಾರ್ ಸೀಲ್ ಮಾಡಿಸಿದ ಅಧಿಕಾರಿಗಳು

by akash

ಚಿಕ್ಕೋಡಿ: ಸಚಿವೆ ಶಶಿಕಲಾ ಜೊಲ್ಲೆ ಮತ್ತು ಸಂಸದ ಅಣ್ಣಾಸಾಹೇಬ ಜೊಲ್ಲೆ ಒಡೆತನ‌ದ‌ ಜ್ಯೋತಿ ಬಜಾರ್​ಅನ್ನು ಚಿಕ್ಕೋಡಿ ಪುರಸಭೆ ಮುಖ್ಯಾಧಿಕಾರಿ ಅಪೂರ್ವ ಬೀದ್ರಿ (KAS) ನೇತೃತ್ವದಲ್ಲಿ ದಾಳಿ ಮಾಡಿ ಸೀಲ್ ಮಾಡಲಾಯ್ತು. ಬೆಳಗಾವಿ‌‌ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿರುವ ಜ್ಯೋತಿ ಬಜಾರ್​ನಲ್ಲಿ ಕೊರೊನಾ ನಿಯಮ ಗಾಳಿಗೆ ತೂರಿ ವ್ಯಾಪಾರ ನಡೆಸುತ್ತಿದ್ದರು. ಈ ಆರೋಪದಡಿ ಅಧಿಕಾರಿಗಳು ದಾಳಿ ನಡೆಸಿ ಸೀಲ್ ಮಾಡಿದರು. ಯಾಕೆ ಅಂಗಡಿ ತಗೆದಿದ್ದೀರಿ ಎಂದು ಜ್ಯೋತಿ ಬಜಾರ್ ಸಿಬ್ಬಂದಿಗೆ ಅಧಿಕಾರಿ ಅಪೂರ್ವ ತರಾಟೆಗೆ ತೆಗೆದುಕೊಂಡರು. ಈ ವೇಳೆ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಆಪ್ತ ಹಾಗೂ ಅಧಿಕಾರಿ ಅಪೂರ್ವ ಮಧ್ಯೆ ವಾಗ್ವಾದ ನಡೆಯಿತು. ನಡು ರಸ್ತೆಯಲ್ಲೇ ಜೊಲ್ಲೆ ಆಪ್ತ ಸಂಜು KAS ಅಧಿಕಾರಿ ಅಪೂರ್ವ ಬಿದ್ರಿ ವಿರುದ್ಧ ಕೂಗಾಡಿ ಗಲಾಟೆ ನಡೆಸಿದ್ದಾರೆ. ಅಧಿಕಾರಿಗಳ ಕೆಲಸಕ್ಕೆ ಅಡ್ಡಿ ಮಾಡುತ್ತೀರಾ ಎಂದು ಅಧಿಕಾರಿ ಅಪೂರ್ವ, ಜೊಲ್ಲೆ ಆಪ್ತ ಸಂಜುಗೆ ತರಾಟೆಗೆ ತೆಗೆದುಕೊಂಡರು. ನೀವು ನನ್ನ ವೈಯಕ್ತಿಕವಾಗಿ ಟಾರ್ಗೆಟ್ ಮಾಡುತ್ತಿದ್ದೀರಾ ಎಂದು ಕೂಗಾಡಿದ ಜೊಲ್ಲೆ ಆಪ್ತ ಸಂಜು ವಿರುದ್ಧ ಪ್ರಕರಣ ದಾಖಲಿಸಲು ಅಧಿಕಾರಿಗಳು ಮುಂದಾಗಿದ್ದಾರೆ.

Related Posts

Leave a Comment