Home Kannada ಚಿನ್ನದ ವ್ಯಾಪಾರಿಗೆ ವಂಚಿಸಿದ್ದ ಮೂವರ ಬಂಧನ

ಚಿನ್ನದ ವ್ಯಾಪಾರಿಗೆ ವಂಚಿಸಿದ್ದ ಮೂವರ ಬಂಧನ

by akash

ಶಿವಮೊಗ್ಗ: ಚಿನ್ನದ ವ್ಯಾಪಾರಿಯೊಬ್ಬರಿಗೆ ಕಡಿಮೆ ದರಕ್ಕೆ ಬಂಗಾರ ನೀಡುವುದಾಗಿ ನಂಬಿಸಿ ವಂಚಿಸಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಸಾಗರ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ. ಸಾಗರ ಪಟ್ಟಣದ ಜೈವೀರ್, ಬ್ಯಾಟರಾಯಮಪುರದ ಶಶಿಕುಮಾರ್ ಮತ್ತು ಶರತ್ ಬಂಧಿತ ಆರೋಪಿಗಳು. ಇವರು ಸಾಗರ ತಾಲೂಕಿನ ಶಿರವಾಳ ಗ್ರಾಮದ ಬಳಿ ಚಿನ್ನದ ವ್ಯಾಪಾರಿಯೊಬ್ಬರಿಗೆ ಕಡಿಮೆ ದರಕ್ಕೆ ಬಂಗಾರ ನೀಡುವುದಾಗಿ ನಂಬಿಸಿ, ಆತನಿಂದ 7.50 ಲಕ್ಷ ರೂ. ದೋಚಿ ಪರಾರಿಯಾಗಿದ್ದರು. ಈ ಕುರಿತು ಸಾಗರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಸದ್ಯ ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಕೃತ್ಯಕ್ಕೆ ಬಳಸಿದ್ದ ಟೊಯೊಟಾ ಇಟಿಯೋಸ್ ಕಾರು ಹಾಗೂ 1.40 ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದಾರೆ.

Related Posts

Leave a Comment