Home Kannada ಜಮೀನಿನಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ರೈತ ಸಾವು

ಜಮೀನಿನಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ರೈತ ಸಾವು

by akash

ಚಾಮರಾಜನಗರ: ಜಮೀನಿನಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ರೈತರೊಬ್ಬರು ಭೀಕರವಾಗಿ ಮೃತಪಟ್ಟಿರುವ ಘಟನೆ ಚಾಮರಾಜನಗರ ತಾಲೂಕಿನ ಕಟ್ಟೇಪುರ ಗ್ರಾಮದಲ್ಲಿ ನಡೆದಿದೆ‌. ವೇಲುಸ್ವಾಮಿ (55) ಎಂಬ ರೈತ ಮೃತ ದುರ್ದೈವಿ. ಜಮೀನಿಗೆ ನೀರು ಹಾಯಿಸಲು ಮೋಟರ್ ಚಾಲು ಮಾಡಲು ತೆರಳಿದ ವೇಳೆ ತುಂಡಾಗಿದ್ದ ವಿದ್ಯುತ್ ತಂತಿ ತಲೆಗೆ ಸ್ಪರ್ಶಿಸಿ ರುಂಡ ಹಾಗೂ ದೇಹ ಬೇರೆ ಬೇರೆಯಾಗಿದೆ. ರುಂಡ ಭಾಗ ಸಂಪೂರ್ಣ ಸುಟ್ಟು ಕರಕಲಾಗಿದೆ. ತಲೆ 3 ಅಡಿ ಎತ್ತರದ ತಂತಿಯಲ್ಲಿ ಸಿಲುಕಿ ನೇತಾಡುತ್ತಿದ್ದು, ದೇಹ ಕೆಳಗೆ ಬಿದ್ದಿದೆ. ಜೋತು ಬಿದ್ದಿದ್ದ ವಿದ್ಯುತ್ ತಂತಿಯನ್ನು ಸರಿಪಡಿಸದಿದ್ದರಿಂದ ಈ ಅವಘಡವಾಗಿದ್ದು, ವಿದ್ಯುತ್ ಇಲಾಖೆ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ರೈತರು ಆರೋಪಿಸಿದ್ದಾರೆ. ಇದುವರೆಗೆ ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ

Related Posts

Leave a Comment