Home Kannada ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ನೂತನ ಅಧ್ಯಕ್ಷರಾಗಿ ಎಲ್.ವಿ.ಅಮೀನ್ ಆಯ್ಕೆ

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ನೂತನ ಅಧ್ಯಕ್ಷರಾಗಿ ಎಲ್.ವಿ.ಅಮೀನ್ ಆಯ್ಕೆ

by akash

ಅವಿಭಜಿತ ದಕ್ಷಿಣ ಕನ್ನಡ ಜೆಲ್ಲೆಯ ಅಭಿವೃದ್ಧಿಗಾಗಿ ಕಳೆದ 20 ವರ್ಷಗಳಿಂದ ಕಾರ್ಯಾತತ್ಪರವಾಗಿರುವ ಏಕೈಕ ಸರಕಾರೇತರ ಸಂಸ್ಥೆ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ನೂತನ ಅಧ್ಯಕ್ಷರಾಗಿ ಸಂಘಟಕ, ಬಿ.ಜೆ.ಪಿ. ನೇತಾರ , ಉದ್ಯಮಿ ಎಲ್.ವಿ.ಅಮೀನ್ ಅವರನ್ನು ಆಯ್ಕೆ ಮಾಡಲಾಯಿತು. ಡಿ. 5 ರಂದು ಸಮಿತಿಯ ವಾರ್ಷಿಕ ಮಹಾಸಭೆಯು ಕುರ್ಲಾ ಪೂರ್ವ ಬಂಟರ ಭವನದ ವಿಸ್ತಾರಿತ ಸಂಕೀರ್ಣ ದ ಸಭಗ್ರಹದಲ್ಲಿ , ಸಮಿತಿಯ ಸ್ಥಾಪಕರು, ಅಧ್ಯಕ್ಷರೂ ಆದ ತೋನ್ಸೆ ಜಯಕೃಷ್ಣ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದು ಮಹಾಸಭೆಯಲ್ಲಿ ,ಗೌರವ ಕಾರ್ಯದರ್ಶಿ ಹಿರಿಯ್ಡಕ ಮೋಹನ್ ದಾಸ್ ಅವರು ನೂತನ ಪದಾಡಿಕಾರಿಗಳ ಹೆಸರನ್ನು ಘೋಷಿಸಿದರು. ಸಮಿತಿಯ ಉಪಾಧ್ಯಕ್ಷರುಗಳಾದ ನಿತ್ಯಾನಂದ ಕೋಟ್ಯಾನ್, ಪಿ.ಡಿ.ಶೆಟ್ಟಿ, ಸಿ.ಎ. ಐ.ಆರ್.ಶೆಟ್ಟಿ ,ರಾಮಚಂದ್ರ ಗಾಣಿಗ, ದೇವದಾಸ್ ಕುಲಾಲ್, ಜಿ.ಟಿ.ಆಚಾರ್ಯ, ಜತೆ ಕಾರ್ಯಧರ್ಶಿ ಹ್ಯಾರಿ ಸಿಕ್ವೆರಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎಲ್.ವಿ.ಅಮೀನ್ ಅವರು ಬಿಲ್ಲವರ ಎಸೋಸಿಯೇಶನ್ ನ ಮಾಜಿ ಅಧ್ಯಕ್ಷರಾಗಿದ್ದು, ಪ್ರಸ್ತುತ ಭಾರತ್ ಬ್ಯಾಂಕ್ ನ ನಿರ್ದೇಶಕರಾಗಿ, ಕನ್ನಡ ಸಂಘ ಸಾಂತಕ್ರೂಜ್ ನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತಿರುವರು. ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಪ್ರಾರಂಭದ ದಿನದಿಂದಲೂ ಸಕ್ರಿಯರಾಗಿ ,ಸಮಿತಿಯ ಎಲ್ಲಾ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದು,ಸಮಿತಿಯ ಯೋಜನೆಗಳು ಸಫಲಗೊಳ್ಳುವಲ್ಲಿ ವಿಶೇಷವಾಗಿ ಶ್ರಮಿಸಿದ್ದಾರೆ. ಬಿ.ಜೆ.ಪಿ.ದಕ್ಷಿಣ ಭಾರತ ಘಟಕದ ಅಧ್ಯಕ್ಷರಾಗಿಯೂ ಸೇವೆಗೈದ ಎಲ್.ವಿ.ಅಮೀನ್ ವಿವಿಧ ಧಾರ್ಮಿಕ ಸಂಘಟನೆಗಳಲ್ಲಿಯೂ ತೊಡಗಿಕೊಂಡಿರುವರು. ನೇರ ನುಡಿ, ದಿಟ್ಟ ನಿರ್ಧಾರ, ವಿವಿಧ ಸಂಘಟನೆಗಳನ್ನು ಮುನ್ನಡೆಸಿದ ಅನುಭವ, ಇವೆಲ್ಲಾ ಅಂಶಗಳನ್ನು ಹೊಂದಿರುವ ಎಲ್.ವಿ.ಅಮೀನ್ ಅವರ ಮುಂದಾಳತ್ವ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಭವಿಷ್ಯದ ಯೋಜನೆಗಳು ಯಶಸ್ಸುಗೊಳ್ಳುವಲ್ಲಿ ಮುಖ್ಯ ಭೂಮಿಕೆ ನಿರ್ವಹಸಲಿದೆ.

Related Posts

Leave a Comment

Translate »