Home Kannada ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಗ್ರಾಮಾಭಿವೃದ್ಧಿ ಯೋಜನೆ ಹಿಂದುಳಿದ ಸಮಾಜ ಬಾಂಧವರಿಗೆ ಮನೆ ನಿರ್ಮಾಣಶೀತಲ ಗೊಂಡಿರುವ ದೇವಸ್ಥಾನಗಳ ಪುನರ್ ನಿರ್ಮಾಣಕ್ಕೆ ದೇಣಿಗೆ ಭರವಸೆ ಐಕಳ ಹರೀಶ್ ಶೆಟ್ಟಿ

ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಗ್ರಾಮಾಭಿವೃದ್ಧಿ ಯೋಜನೆ ಹಿಂದುಳಿದ ಸಮಾಜ ಬಾಂಧವರಿಗೆ ಮನೆ ನಿರ್ಮಾಣಶೀತಲ ಗೊಂಡಿರುವ ದೇವಸ್ಥಾನಗಳ ಪುನರ್ ನಿರ್ಮಾಣಕ್ಕೆ ದೇಣಿಗೆ ಭರವಸೆ ಐಕಳ ಹರೀಶ್ ಶೆಟ್ಟಿ

by Eha

ಮಂಗಳೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿ ಅವರ ಗ್ರಾಮಾಭಿವೃದ್ಧಿ ಯೋಜನೆಯ ಕನಸು ಸಾಕಾರಗೊಳ್ಳುವ ನಿಟ್ಟಿನಲ್ಲಿ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಆರ್ಥಿಕವಾಗಿ ಹಿಂದುಳಿದ ಸಮಾಜ ಬಾಂಧವರಿಗೆ ಮನೆ ನಿರ್ಮಾಣಕ್ಕೆ ನೆರವು ನೀಡುವ ಸಲುವಾಗಿ ಸರಪಾಡಿ ಗ್ರಾಮದ ಮಣಿನಾಲ್ಕೂರು ಎಂಬಲ್ಲಿನ ಶ್ರೀಮತಿ ವಿಮಲಾ ಶೆಟ್ಟಿಯವರ ಮನೆ ನಿರ್ಮಾಣಕ್ಕೆ ಒಕ್ಕೂಟದ ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿ ಅವರು ಒಕ್ಕೂಟದ ಉಪಾಧ್ಯಕ್ಷರಾದ ಶ್ರೀ ಕರ್ನಿರೆ ವಿಶ್ವನಾಥ ಶೆಟ್ಟಿಯವರು ಸರಪಾಡಿ ಗೆ ಬೇಟಿ ದೇನಿಗೆ ಹಸ್ತಾಂತರಿಸಿದರುಇದೆ ಸಂದರ್ಭ ಸ್ಥಳೀಯ ಸಮಾಜ ಬಾಂಧವರು  ಮತ್ತು ಖ್ಯಾತ ಯಕ್ಷಗಾನ ಕಲಾವಿದ ಶ್ರೀ ಸರಪಾಡಿ ಅಶೋಕ್ ಶೆಟ್ಟಿ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ  ಸರಪಾಡಿಯ ಮಣಿನಾಲ್ಕೂರು ಗ್ರಾಮದ ಆರಾಧ್ಯ ದೇವರಾದ ಇಳಿಯುರು ಶ್ರೀ ಮಹಾವಿಷ್ಣು ದೇವಸ್ಥಾನಕ್ಕೆ ಭೇಟಿ ನೀಡುವಂತೆ ಒತ್ತಾಯಿಸಿದರು ಸ್ಥಳೀಯ ಸಮಾಜ ಬಾಂಧವರ ಒತ್ತಡಕ್ಕೆ ಮಣಿದು ಶ್ರೀ ಕ್ಷೇತ್ರವನ್ನು ಸಂದರ್ಶಿಸಿ ಕಳೆದ ಒಂದೂವರೆ ವರ್ಷಗಳಿಂದ ಕಾಮಗಾರಿಯು ಸ್ಥಗಿತಗೊಂಡು ತೊಂದರೆ ಎಲ್ಲಿರುವ ವಿಚಾರವನ್ನು ಮನಗಂಡು ದೇವಸ್ಥಾನದ ಕಾಮಗಾರಿಯನ್ನು ಪುನಃ ಪುನರಾರಂಭಿಸಲು ಸೇವಾರೂಪದಲ್ಲಿ ತನ್ನ ಕಾಣಿಕೆಯನ್ನು ನೀಡುವುದಾಗಿ ಭರವಸೆಯನ್ನು ನೀಡಿದರು  ಈ ಸಂದರ್ಭದಲ್ಲಿ ಖ್ಯಾತ ಯಕ್ಷಗಾನ ಕಲಾವಿದ ಶ್ರೀ ಸರಪಾಡಿ ಅಶೋಕ್ ಶೆಟ್ಟಿ, ಒಕ್ಕೂಟದ ಮಾಜಿ ಕೋಶಾಧಿಕಾರಿ ಶ್ರೀ ಕೊಲ್ಲಾ ಡಿ ಬಾಲಕೃಷ್ಣ ರೈ, ಸಾಲೆತ್ತೂರು ಬಂಟರ ಸಂಘದ ಅಧ್ಯಕ್ಷರಾದ ಶ್ರೀ ದೇವಪ್ಪ  ಶೇಖ,  ಶ್ರೀ ಪ್ರಕಾಶ್ ಶೆಟ್ಟಿ, ಬಂಟ್ವಾಳ ತಾಲೂಕು ಬಂಟರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ರೀ ಅರವಿಂದ ರೈ ಮೂರ್ಜೆ ಬೆಟ್ಟು, ಶ್ರೀ ಅಮರೇಶ ಶೆಟ್ಟಿ ತಿರುವಾಜೆ, ಶ್ರೀ ಸುರೇಶ್ ಶೆಟ್ಟಿ ಸೂರಿಂಜೆ, ಶ್ರೀ ರವಿ ಶೆಟ್ಟಿ ಜತ್ತ ಬೆಟ್ಟು,   ಶ್ರೀ ಸಂಪತ್ ಕುಮಾರ್ ಶೆಟ್ಟಿ ಮುಂದ್ರೆಲ್ ಗುತ್ತು, ಶ್ರೀ ಶಿವರಾಮಶೆಟ್ಟಿ ತೋಟ,ಶ್ರೀ ಯೋಗೀಶ್ ಶೆಟ್ಟಿಶ್ರೀ ಆನಂದ ಶೆಟ್ಟಿ, ಶ್ರೀಮತಿ ಕಂಚಾಲಾಕ್ಷಿ,ಶ್ರೀ ರಾಧಾಕೃಷ್ಣ ರೈ, ಶ್ರೀಆನಂದ ಶೆಟ್ಟಿ ಆರ್ ಮೂಡಿ, ಶ್ರೀ ವಿಶ್ವನಾಥ ಶೆಟ್ಟಿ ಕೊಳಂಬೆ ಶ್ರೀ ಶಿವಪ್ಪ ಪೂಜಾರಿ ಶ್ರೀ ಲಿಂಗಪ್ಪ ಪೂಜಾರಿ ಶ್ರೀಮತಿಜಯಂತಿ ಉಪಸ್ಥಿತರಿದ್ದರು.

Related Posts

Leave a Comment