Home Kannada ಜಿಐಸಿ-ಐಡಿಎಫ್ ವತಿಯಿಂದ ಹೈಜಿನಿಕ್ ಕಿಟ್ ವಿತರಣೆ.

ಜಿಐಸಿ-ಐಡಿಎಫ್ ವತಿಯಿಂದ ಹೈಜಿನಿಕ್ ಕಿಟ್ ವಿತರಣೆ.

by akash

ಜನರಲ್ ಇನ್ಸುರೆನ್ಸ್ ಕಾರ್ಪೊರೇಶನ್ ಆಫ್ ಇಂಡಿಯಾ ಹಾಗೂ ಇಂಡಿಯನ್ ಡೆವೇಲೋಪಮೆಂಟ್ ಫೌಂಡೇಶನ್ ಜಂಟಿಯಾಗಿ ಗಾಂಧಿ ಜಯಂತಿಯಂದು ಧಾರವಿಯ ಛತ್ರಪತಿ ಶಿವಾಜಿ ವಿದ್ಯಾಲಯದ ವಿದ್ಯಾರ್ಥಿನಿಯರಿಗೆ ಋತುಚಕ್ರದ ಸಮಯ ಉಪಯೋಗಿಸುವ ವಸ್ತುಗಳ ಹೈಜಿನಿಕ್ ಕಿಟ್ ವಿತರಿಸುವ ಕಾರ್ಯವನ್ನು ಆಯೋಜಿಸಿತ್ತು. ಜಿಐಸಿ.ಯ ಸಿಎಸ್ ಆರ್ ಮುಖೇನ ನಡೆದ ಕಾರ್ಯಕ್ರಮದಲ್ಲಿ ಜಿಐಸಿ ಯ ಮಹಾ ಪ್ರಬಂಧಕ ಹಿತೇಶ್ ಜೋಶಿ ಮಾತಾನಾಡುತ್ತ “ಜಿಐಸಿ ಯು ದೇಶದ ವಿವಿಧ ಕಡೆಗಳಲ್ಲಿ ಸಮಾಜ ಪರ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಿದ್ದು, ಸ್ವಚ್ಛತೆ ಹಾಗೂ ಪರಿಸರ ರಕ್ಷಣೆಯ ಬಗ್ಗೆ ವಿಶೇಷವಾಗಿ ಮಹತ್ವ ನೀಡುತ್ತಿದೆ, ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಆರೋಗ್ಯದ ಕುರಿತು ಕಾರ್ಯ ತತ್ಪರವಾಗಿದೆ” ಎಂದರು. ಜಿ.ಐ.ಸಿ.ಯ ಮಹಾ ಪ್ರಭಂದಕಿ ಗಿರಿಜಾ ಸುಬ್ರಮಣ್ಯ “ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಸ್ವಚ್ಛತೆಯ ಬಗ್ಗೆಯೂ ಗಮನಹರಿಸಬೇಕು.ಉತ್ತಮ ಆರೋಗ್ಯಕ್ಕಾಗಿ ದೇಹದ ನೈರ್ಮಲ್ಯವೂ ಮುಖ್ಯ್ ವಾಗಿದೆ” ಎಂದರು. ಜಿಐಸಿ ಯ ಹಿರಿಯ ಪ್ರಬಂಧಕ ಡಾ.ಪ್ರಕಾಶ್ ಮೂಡಬಿದ್ರಿ, ಉಪಮಹಾ ಪ್ರಬಂದಕಿ ಜಯ ಶ್ರಿ ಪ್ರಭು ವಿದ್ಯಾರ್ಥಿನಿಯರಿಗೆ ಹಿತ ವಚನ ನುಡಿದರು. ಪ್ರಾರಂಭದಲ್ಲಿ ಪ್ರಾಂಶುಪಾಲೆ ಸ್ವಾತಿ ಹೊಲ್ಮುಕೆ ಎಲ್ಲರನ್ನೂ ಸ್ವಾಗತಿಸಿ , ಮಹಾತ್ಮ ಗಾಂಧಿಯವರ ಸ್ವಚ್ಛ ಭಾರತದ ಕನಸು ನನಸಾಗಿಸಬೇಕು ಎಂದರು.ಐಡಿಎಫ್ ನ ಮುಖ್ಯ ಕಾರ್ಯ ನಿರ್ವಹನಾಧಿಕಾರಿ ಡಾ.ನಾರಾಯಣ ಅಯ್ಯರ್ “ಜಿಐಸಿ ಯು ಸಿ.ಎಸ್.ಆರ್ ನ ಮೂಲಕ ಮಾಡುತ್ತಿರುವ ಕಾರ್ಯಗಳನ್ನು ಶ್ಲಾಘಿಸಿದರು, ಹಾಗೂ ಕಾರ್ಯಕ್ರಮಕ್ಕೆ ಸಹಕರಿಸದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಸಮಾಜ ಸೇವಕ ಡಾ.ಸತೀಶ್ ಬಂಗೇರ ಉಪಸ್ಥಿತರಿದ್ದರು. ಸುಮಾರು ನೂರು ವಿದ್ಯಾರ್ಥಿನಿಯರಿಗೆ ಹೈಜಿನಿಕ್ ಕಿಟ್ ಗಳನ್ನು ವಿತರಿಸಲಾಯಿತು.

Related Posts

Leave a Comment

Translate »