Home Kannada ಜ್ಯುವೆಲ್ಲರಿ ಅಂಗಡಿಯಲ್ಲಿ ಕಳ್ಳತನವಾಗಿದ್ದ ಚಿನ್ನಾಭರಣ ವಶ

ಜ್ಯುವೆಲ್ಲರಿ ಅಂಗಡಿಯಲ್ಲಿ ಕಳ್ಳತನವಾಗಿದ್ದ ಚಿನ್ನಾಭರಣ ವಶ

by Eha

ಮೈಸೂರು: ಚಿನ್ನಾಭರಣದ ಅಂಗಡಿಯಲ್ಲಿ ಕಣ್ಣಿಗೆ ಕಾರದಪುಡಿ ಎರಚಿ 14 ಚಿನ್ನದ ಚೈನ್​, 1 ಚಿನ್ನದ ಉಂಗುರ ದೋಚಿದ್ದ ಪ್ರಕರಣ ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, 4.20 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಪೊಲೀಸರು ವಶಪಡಿಸಿಕೊಂಡಿದ್ದಾರೆ. 2020ರ ಡಿಸೆಂಬರ್ 18ರಂದು ಸಂಜೆ 7.30ರ ಸಮಯದಲ್ಲಿ ಈ ಘಟನೆ ನಡೆದಿತ್ತು. ಅಪರಿಚಿತ ವ್ಯಕ್ತಿಯೊಬ್ಬ ಮೇಟಗಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಹೆಬ್ಬಾಳು ಮುಖ್ಯ ರಸ್ತೆಯ ಕೈಲಾಸ್ ಬ್ಯಾಂಕರ್ಸ್ & ಜುವೆಲ್ಲರ್ಸ್​​ ಅಂಗಡಿಗೆ ಗಿರಾಕಿಯಂತೆ ಹೋಗಿ ಚಿನ್ನದ ಚೈನ್​ ಹಾಗೂ ಉಂಗುರ ಖರೀದಿ ಮಾಡುವ ರೀತಿ ನಟನೆ ಮಾಡಿ, ಅಂಗಡಿಯಲ್ಲಿದ್ದ ಮಾಲೀಕನ ಕಣ್ಣಿಗೆ ಕಾರದಪುಡಿ ಎರಚಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದನು. ಈ ಸಂಬಂಧ ಮೇಟಗಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆ ಕೈಗೊಂಡ ಮೇಟಗಳ್ಳಿ ಪೊಲೀಸರು,ಸಿಸಿಟಿವಿ ದೃಶ್ಯಾವಳಿ ಹಾಗೂ ಇತರೆ ಆಧಾರದ ಸಹಾಯದಿಂದ ಚಿನ್ನಾಭರಣ ವಶಕ್ಕೆ ಪಡೆದುಕೊಂಡಿದ್ದಾರೆ. ವಿಶೇಕ್ಷ ಪೊಲೀಸ್ ತಂಡ ರಾಜಸ್ಥಾನದ ಜಾಲೋರ್​​ ಜಿಲ್ಲೆಯ ಚೌರಾ ಗ್ರಾಮಕ್ಕೆ ತೆರಳಿ ವಾರಗಳ ಕಾಲ ಅಲ್ಲೇ ಉಳಿದುಕೊಂಡು ಆರೋಪಿ ಪತ್ತೆಗಾಗಿ ಪ್ರಯತ್ನ ನಡೆಸಿದ್ದರು. ಇದರ ಮಾಹಿತಿ ಆತನಿಗೆ ಗೊತ್ತಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದನು. ಆದರೆ ಆರೋಪಿ ದೋಚಿದ್ದ ಚಿನ್ನದ ಒಡೆವೆ ಮೈಸೂರಿನ ಸ್ಟೀಲ್​ ಫ್ಯಾಬ್ರಿಕೇಷನ್​​ನಲ್ಲಿ ಕೆಲಸ ಮಾಡ್ತಿದ್ದ ರಾಜಸ್ಥಾನ ಮೂಲಕ ಸಂಬಂಧಿ ಮನೆಯಲ್ಲಿ ಬಚ್ಚಿಟ್ಟಿರುವ ಮಾಹಿತಿ ಗೊತ್ತಾಗಿದೆ. ಅವರ ಮನೆಗೆ ತೆರಳಿ ಪರಿಶೀಲನೆ ನಡೆಸಿದಾಗ 4.20 ಲಕ್ಷ ರೂ. ಮೌಲ್ಯದ 80 ಗ್ರಾಂ ತೂಕದ 14 ಚಿನ್ನದ ಚೈನ್​, 1 ಚಿನ್ನದ ಉಂಗುರು ವಶಕ್ಕೆ ಪಡೆದುಕೊಂಡಿದ್ದಾರೆ. ಇದೀಗ ಆರೋಪಿಗಾಗಿ ಶೋಧಕಾರ್ಯ ಮುಂದುವರೆಸಿದ್ದಾರೆ.

Related Posts

Leave a Comment