Home Kannada ಟಾಯ್ಲೆಟ್​ನೊಳಗೆ ಬಂದಿಯಾದ ಚಿರತೆ ಮತ್ತು ನಾಯಿ..!

ಟಾಯ್ಲೆಟ್​ನೊಳಗೆ ಬಂದಿಯಾದ ಚಿರತೆ ಮತ್ತು ನಾಯಿ..!

by Eha

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಕೈಕಂಬ ಎಂಬಲ್ಲಿ ಶೌಚಾಲಯದೊಳಗೆ ಚಿರತೆ ಮತ್ತು ನಾಯಿ ಬಂದಿಯಾದ ಘಟನೆ ಇಂದು ಮುಂಜಾನೆ ನಡೆದಿದೆ. ಸುಬ್ರಹ್ಮಣ್ಯ ಸಮೀಪದ ಕೈಕಂಬ ರೇಗಪ್ಪ ಎಂಬುವರ ಮನೆಯ ನಾಯಿಯನ್ನು ಹಿಡಿಯಲು ಚಿರತೆ ಓಡಿಸಿಕೊಂಡು ಬಂದಾಗ, ನಾಯಿ ಹೆದರಿ ಓಡಿ ಶೌಚಾಲಯದೊಳಗೆ ನುಗ್ಗಿದೆ, ಅದರ ಜೊತೆಗೆ ಚಿರತೆಯೂ ನುಗ್ಗಿದೆ.

ಚಿರತೆಯನ್ನು ಗಮನಿಸಿದ ಮನೆಯವರು ಬಾಗಿಲು ಹಾಕಿದ್ದು ಚಿರತೆ ಮತ್ತು ನಾಯಿ ಶೌಚಾಲಯದೊಳಗಡೆ ಬಂದಿಯಾಗಿವೆ. ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಅರಿವಳಿಕೆ ನೀಡಿ ಚಿರತೆಯನ್ನು ಹಿಡಿಯಲಾಗುವುದು ಎಂದು ತಿಳಿದು ಬಂದಿದೆ. ಇನ್ನು ಸಾರ್ವಜನಿಕರು ಸ್ಥಳಕ್ಕೆ ಜಮಾಯಿಸಿದ್ದು, ಚಿರತೆಯನ್ನು ಕೆರಳಿಸದಂತೆ ಅರಣ್ಯ ಅಧಿಕಾರಿಗಳು ವಿನಂತಿ ಮಾಡಿದ್ದಾರೆ.

Related Posts

Leave a Comment