Home Kannada ಡ್ರ್ಯಾಗರ್​ ತೋರಿಸಿ ದರೋಡೆ ನಡೆಸಿದ ಪ್ರಕರಣ: ಮೂವರು ಆರೋಪಿಗಳ ಬಂಧನ

ಡ್ರ್ಯಾಗರ್​ ತೋರಿಸಿ ದರೋಡೆ ನಡೆಸಿದ ಪ್ರಕರಣ: ಮೂವರು ಆರೋಪಿಗಳ ಬಂಧನ

by Eha

ಬೆಂಗಳೂರು: ನೀರು ತುಂಬಲು ಹೊರಗಡೆ ಬಂದಿದ್ದವರಿಗೆ ಡ್ರ್ಯಾಗರ್​ ತೋರಿಸಿ ದರೋಡೆ ಮಾಡಿದ್ದ ಪ್ರಕರಣ ಸಂಬಂಧ ಕಾಟನ್​ ಪೇಟೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಸೈಯದ್ ಅರ್ಬಾಸ್​, ದಾದಾ ಪೀರ್, ಜಬ್ಬಿ ಪಾಷಾ ಬಂಧಿತ ಆರೋಪಿಗಳು. ಇವರು ತಡರಾತ್ರಿ ನೀರು ತುಂಬಲು ಆಚೆ ಬಂದಿದ್ದವರಿಗೆ ಡ್ರ್ಯಾಗನ್​ ತೋರಿಸಿ ಅವರ ಬಳಿಯಿದ್ದ ಮೊಬೈಲ್​, ಪರ್ಸ್​​ ಸೇರಿದಂತೆ ನಗದನ್ನು ದೋಚಿ ಪರಾರಿಯಾಗಿದ್ದರು. ಈ ಸಂಬಂಧ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನು ಆರೋಪಿಗಳ ವಿಚಾರಣೆ ವೇಳೆ ಬೈಕ್ ಕಳ್ಳತನದ ಪ್ರಕರಣ ಬೆಳಕಿಗೆ ಬಂದಿದ್ದು, ಮಹಾಲಕ್ಷ್ಮಿ, ಬ್ಯಾಡರಹಳ್ಳಿ, ಕಾಟನ್ ಪೇಟೆ ಪೊಲೀಸ್​​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣಗಳು ದಾಖಲಾಗಿವೆ. ಬಂಧಿತರಿಂದ 4 ಲಕ್ಷ ಮೌಲ್ಯದ ದ್ವಿಚಕ್ರ ವಾಹನ, 16 ಮೊಬೈಲ್​ಗಳು, 650 ರೂ. ನಗದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Related Posts

Leave a Comment