ಮಂಗಳೂರು: ಪೊಲೀಸರ ಹತ್ಯೆಗೆ ಯತ್ನಿಸಿದ 6 ಜನರ ತಂಡಕ್ಕೆ ‘ಮಾಯಾ ಗ್ಯಾಂಗ್’ ಎಂದು ಹೆಸರಿಟ್ಟುಕೊಂಡಿರುವುದು ಇತ್ತೀಚೆಗೆ ಬೆಳಕಿಗೆ ಬಂದಿತ್ತು. ಆದರೆ ಇದೀಗ ಆ ಹೆಸರು ಆರೋಪಿಯೊಬ್ಬನ ಮಾಜಿ ಪ್ರೇಯಸಿಯ ಹೆಸರು ಎಂದು ತಿಳಿದು ಬಂದಿದೆ. 2019ರ ಡಿಸೆಂಬರ್ 19ರಂದು ಮಂಗಳೂರು ಪೊಲೀಸ್ ಗೋಲಿಬಾರ್ ಪ್ರತೀಕಾರಕ್ಕೆ ಅನೀಶ್ ಅಶ್ರಫ್, ಮಹಮ್ಮದ್ ಖಾಯೀಸ್, ಅಬ್ದುಲ್ ಖಾದರ್ ಫಹಾದ್, ರಾಹಿಲ್ ಮತ್ತು ಶೇಖ್ ಮುಹಮ್ಮದ್ ಹ್ಯಾರಿಸ್ ತಂಡ ಕಟ್ಟಿದ್ದರು ಎನ್ನಲಾಗಿದೆ.
ಈ ತಂಡಕ್ಕೆ ಆರೋಪಿ ಅನೀಶ್ ಅಶ್ರಫ್, ಸಾವನ್ನಪ್ಪಿದ್ದ ತನ್ನ ಮಾಜಿ ಪ್ರೇಯಸಿಯ ಹೆಸರನ್ನೇ ಇಟ್ಟಿದ್ದ ಎಂಬುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಜೊತೆಗೆ ಇವರು ಮಾಯಾ ಗ್ಯಾಂಗ್, ಮಾಯಾ ಟೀಮ್, ಮಾಯಾ ಟ್ರೂಪ್ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಈ ತಂಡ ಮಂಗಳೂರಿನ ನ್ಯೂ ಚಿತ್ರಮಂದಿರ ಬಳಿಯ ಚೆಕ್ ಪೋಸ್ಟ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗಣೇಶ್ ಕಾಮತ್ ಎಂಬುವವರ ಹತ್ಯೆಗೆ ಯತ್ನಿಸಿತ್ತು.