Home Kannada ತಂದೆಯಿಂದಲೇ ದಿವ್ಯಾಂಗ ಮಗನ ಬರ್ಬರ ಹತ್ಯೆ

ತಂದೆಯಿಂದಲೇ ದಿವ್ಯಾಂಗ ಮಗನ ಬರ್ಬರ ಹತ್ಯೆ

by Eha

ಅಥಣಿ: ಸ್ವಂತ ಮಗನನ್ನೇ ತಂದೆ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತಾಲೂಕಿನ ಸತ್ತಿ ಗ್ರಾಮದಲ್ಲಿ ನಡೆದಿದೆ. ಗುರುಲಿಂಗ ದಾನಸೂರ (36) ಕೊಲೆಯಾದವ ಎನ್ನಲಾಗಿದೆ. ತಂದೆ ಸಿದ್ದಪ್ಪ ದಾನಸೂರ ಮದ್ಯದ ಅಮಲಿನಲ್ಲಿ ಮಗನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಕೊಲೆಗೈದಿರುವುದಾಗಿ ತಿಳಿದು ಬಂದಿದೆ. ಕೊಲೆಯಾದ ಗುರುಲಿಂಗ ದಿವ್ಯಾಂಗನಾಗಿದ್ದು, ದಾಳಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಅಥಣಿ ಪೊಲೀಸ್​​​ ಠಾಣೆಯಲ್ಲಿ ದೂರು ದಾಖಲಾಗಿದೆ.

Related Posts

Leave a Comment