Home Kannada ತಡರಾತ್ರಿ ಕಿಡಿಗೇಡಿಗಳ ದಾಂಧಲೆ: 20 ಕಾರಿನ ಗಾಜು ಪೀಸ್ ಪೀಸ್

ತಡರಾತ್ರಿ ಕಿಡಿಗೇಡಿಗಳ ದಾಂಧಲೆ: 20 ಕಾರಿನ ಗಾಜು ಪೀಸ್ ಪೀಸ್

by Eha

ಬೆಂಗಳೂರು: ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ವಾಹನಗಳ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಅವುಗಳ ಗಾಜು ಒಡೆದು ಹಾಕಿರುವ ಘಟನೆ ಕಳೆದ ರಾತ್ರಿ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ರಸ್ತೆಯಲ್ಲಿ‌ ನಿಲ್ಲಿಸಲಾಗಿದ್ದ ಕಾರುಗಳನ್ನು ಗುರಿಯಾಗಿಸಿಕೊಂಡ ಇಬ್ಬರು ದುಷ್ಕರ್ಮಿಗಳು, ಬಲವಾದ ಆಯುಧದಿಂದ‌ ವಾಹನಗಳ ಗಾಜು ಒಡೆದಿದ್ದಾರೆ. ಸುಮಾರು 20 ಕಾರುಗಳ ಗಾಜು ಪುಡಿ-ಪುಡಿ ಮಾಡಿದ್ದಾರೆ. ಸದ್ಯ ಆರೋಪಿಗಳ ಕೃತ್ಯ‌ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಂಬಂಧ ಸಿ.ಕೆ. ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Posts

Leave a Comment