Home Kannada ತೆಲಿಗಿಯಲ್ಲಿ ಮಣ್ಣುಮುಕ್ಕ ಹಾವು ಮಾರಾಟಕ್ಕೆ ಯತ್ನ: ಇಬ್ಬರ ಬಂಧನ

ತೆಲಿಗಿಯಲ್ಲಿ ಮಣ್ಣುಮುಕ್ಕ ಹಾವು ಮಾರಾಟಕ್ಕೆ ಯತ್ನ: ಇಬ್ಬರ ಬಂಧನ

by Eha

ತೆಲಿಗಿ (ಬಳ್ಳಾರಿ): ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ತೆಲಿಗಿ ಗ್ರಾಮದ ಅರಣ್ಯ ಇಲಾಖೆ ಅಧಿಕಾರಿಗಳು ಮಣ್ಣು ಮುಕ್ಕ ಹಾವು ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರನ್ನು ಬಂಧಿಸಿ 2 ಹಾವುಗಳನ್ನು ವಶಪಡಿಸಿಕೊಂಡಿದ್ದಾರೆ, ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ. ಕ್ಯಾರಕಟ್ಟೆ ಗ್ರಾಮದ ಬಸವರಾಜ್ (22) ತೆಲಿಗಿ ಗ್ರಾಮದ ಟಿ. ಶಿವರಾಜ್ (23), ಬಂಧಿತರು. ಪರಶುರಾಮ್ ಎಂಬಾತ ತಲೆಮರೆಸಿಕೊಂಡಿದ್ದಾನೆ. ಇಬ್ಭರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯ ವಡ್ಡರ ಬಂಡೆ ಗುಂಡೂರಾವ್ ಓಣಿಯ ನಡುರಸ್ತೆಯಲ್ಲೇ ಕುಡಿಯುವ ನೀರಿನ ಪೈಪ್ ಗೆ ಸಣ್ಣದೊಂದು‌ ರಂಧ್ರ ಬಿದ್ದ ಪರಿಣಾಮ ಕಳೆದೊಂದು ವಾರದಿಂದ ನೀರು ಅನಗತ್ಯ ಸೋರಿಕೆಯಾಗುತ್ತಿದೆ. ಈ ಕುರಿತು ಮಹಾನಗರ ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್ ಸೇರಿದಂತೆ ಅಧಿಕಾರಿ ವರ್ಗದವರ ಗಮನ ಸೆಳೆದ್ರೂ ಕೂಡ ಈವರೆಗೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಅನಗತ್ಯ ನೀರು ಪೋಲಾಗೋದರ ಕುರಿತು ಐದಾರು ಬಾರಿ ಮಹಾನಗರ ಪಾಲಿಕೆ ಅಧಿಕಾರಿಗಳ ಗಮನ ಸೆಳೆದಿದ್ದು, ಈವರೆಗೂ ಕೂಡ ನೀರು ಪೋಲಾಗೋದನ್ನ ತಡೆದೇ ಇಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

Related Posts

Leave a Comment