Home Kannada ದಾವಣಗೆರೆ ಪೊಲೀಸರ ಮಿಂಚಿನ ಕಾರ್ಯಾಚರಣೆ: 2.76 ಲಕ್ಷ ರೂ. ಮೌಲ್ಯದ ಸ್ಫೋಟಕ ವಶ, ಓರ್ವನ ಬಂಧನ

ದಾವಣಗೆರೆ ಪೊಲೀಸರ ಮಿಂಚಿನ ಕಾರ್ಯಾಚರಣೆ: 2.76 ಲಕ್ಷ ರೂ. ಮೌಲ್ಯದ ಸ್ಫೋಟಕ ವಶ, ಓರ್ವನ ಬಂಧನ

by Eha

ದಾವಣಗೆರೆ: ಬೆಣ್ಣೆನಗರಿ ಪೊಲೀಸರು ಮಹತ್ವದ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಸಂಗ್ರಹಿಸಿದ್ದ 2.76 ಲಕ್ಷ ರೂ. ಮೌಲ್ಯದ ಸ್ಫೋಟಕ ವಸ್ತುಗಳನ್ನು ವಶಕ್ಕೆ ಪಡೆದು ಓರ್ವನನ್ನು ಬಂಧಿಸಿದ್ದಾರೆ. ಶೇಕ್ ಮುಜಾಹಿದ್ ಬಂಧಿತ ಆರೋಪಿ. ದಾವಣಗೆರೆ ಗ್ರಾಮಾಂತರ ಡಿವೈಎಸ್​ಪಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಭಾನುವಾರ ಕಾಡಜ್ಜಿ ಗ್ರಾಮದ ಷಣ್ಮುಖಪ್ಪ ಎನ್ನುವರಿಗೆ ಸೇರಿದ್ದ 3.62 ಲಕ್ಷ ಮೌಲ್ಯದ ಸ್ಫೋಟಕ ವಶಕ್ಕೆ ಪಡೆದ ಪ್ರಕರಣಕ್ಕೆ‌ ಸಂಬಂಧಿಸಿದಂತೆ ಮತ್ತೆ ಸೋಮವಾರ 2.76 ಲಕ್ಷ ಮೌಲ್ಯದ ಸ್ಫೋಟಕ ವಸ್ತುಗಳನ್ನು ವಶಕ್ಕೆ‌ ಪಡೆದಿದ್ದಾರೆ.

ಆರೋಪಿ ವಿಕ್ರಮ್ ಎಂಬಾತ ದಾವಣಗೆರೆಯಿಂದ ಮಾನ್ವಿಗೆ ಸ್ಫೋಟಕಗಳನ್ನು ಮಾರಾಟ ಮಾಡಿದ್ದ. ಇದರ ಜಾಡು ಹಿಡಿದು ಖಚಿತ ಮಾಹಿತಿ ತೆರಳಿದ್ದ ಪೊಲೀಸರು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಆರ್​ಜಿ ಕ್ಯಾಂಪ್​​ನಲ್ಲಿ ಸಂಗ್ರಹಿಸಿಟ್ಟಿದ್ದ ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತನಿಂದ 50 ಬಾಕ್ಸ್​​ ಜಿಲೆಟಿನ್, 6 ಬಾಕ್ಸ್ ಎಲೆಕ್ಟ್ರಾನಿಕ್ ಡಿಟೋನೇಟರ್, 750 ಕೆಜಿ ಅಮೋನಿಯಂ ನೈಟ್ರೇಟ್ ಪೌಡರ್ ಸೇರಿದಂತೆ ಹಲವು ಸ್ಫೋಟಕ ವಸ್ತುಗಳನ್ನು‌ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Related Posts

Leave a Comment