Home Kannada ದುಷ್ಕರ್ಮಿಗಳಿಂದ ಗುಂಡಿನ ದಾಳಿ, ​​ಸಬ್ ಇನ್ಸ್‌ಪೆಕ್ಟರ್ ಸ್ಥಳದಲ್ಲೇ ಸಾವು

ದುಷ್ಕರ್ಮಿಗಳಿಂದ ಗುಂಡಿನ ದಾಳಿ, ​​ಸಬ್ ಇನ್ಸ್‌ಪೆಕ್ಟರ್ ಸ್ಥಳದಲ್ಲೇ ಸಾವು

by Eha

ಸೀತಮರ್ಹಿ(ಬಿಹಾರ): ಜಿಲ್ಲೆಯ ಕನ್ಯೆಯ ಎಂಬ ಗ್ರಾಮದಲ್ಲಿ ಆರೋಪಿಗಳನ್ನು ಸೆರೆ ಹಿಡಿಯಲೆಂದು ತೆರಳಿದ್ದ ಪೊಲೀಸರ ತಂಡದ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿದ್ದು,  ಸಬ್ ಇನ್ಸ್‌ಪೆಕ್ಟರ್ ದಿನೇಶ್ ಶಾ ಎಂಬಾತ ಸಾವಿಗೀಡಾಗಿದ್ದಾರೆ. ಮೇಜರ್‌ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಕನ್ಯೆಯ ಗ್ರಾಮದಲ್ಲಿ ಅಕ್ರಮ ಮಧ್ಯ, ಶಸ್ತ್ರಾಸ್ತ್ರ ಸಾಗಾಣಿಕೆ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು, ಸಬ್ ಇನ್ಸ್‌ಪೆಕ್ಟರ್ ದಿನೇಶ್ ಶಾ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಂಡಿದ್ದರು. ಪೊಲೀಸರು ದಾಳಿ ನಡೆಸಿದ ವೇಳೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು, ಪೊಲೀಸ್​ ಅಧಿಕಾರಿ ದಿನೇಶ್ ಶಾ ಸಾವಗೀಡಾಗಿದ್ದಾರೆ ಹಾಗೂ ಚೌಕಿದಾರ್ ಲಾಲ್‌ಬಾಬು ಸೇರಿದಂತೆ ಇನ್ನಿತರ ಪೊಲೀಸರಿಗೆ ತೀವ್ರ ಗಾಯಗಳಾಗಿವೆ. ಈ ಆರೋಪಿಗಳು ಅಕ್ರಮ ಮಧ್ಯ, ಶಸ್ತ್ರಾಸ್ತ್ರ ಸಾಗಾಣಿಕೆ ಸೇರಿದಂತೆ 12ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Related Posts

Leave a Comment