Home Kannada ಧಾರವಾಡದಲ್ಲಿ ಗೋ ಕಳ್ಳತನ; ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಧಾರವಾಡದಲ್ಲಿ ಗೋ ಕಳ್ಳತನ; ಸಿಸಿಟಿವಿಯಲ್ಲಿ ದೃಶ್ಯ ಸೆರೆ

by Eha

ಧಾರವಾಡ: ಧಾರವಾಡದಲ್ಲಿ ಗೋವು ಕಳ್ಳರ ಹಾವಳಿ ಜೋರಾಗಿದೆ. ಮನೆ ಬಳಿಯಿರುವ ಗೋವುಗಳು ರಾತ್ರೋರಾತ್ರಿ ನಾಪತ್ತೆಯಾಗುತ್ತಿವೆ. ಕಳ್ಳರು ಕಾರಿನಲ್ಲಿ ಗೋವುಗಳನ್ನು ತುಂಬಿಕೊಂಡು ಹೋದ ಘಟನೆ ಬೆಳಕಿಗೆ ಬಂದಿದೆ. ಧಾರವಾಡ ಕೆಲಗೆರಿ ರಸ್ತೆಯ ವೈದ್ಯಮಠ ಕಾಂಪ್ಲೆಕ್ಸ್ ಬಳಿ ಈ ಘಟನೆ ನಡೆದಿದ್ದು, ಒಟ್ಟು ಎರಡು ಗೋವುಗಳನ್ನು ಕಳ್ಳರು ತುಂಬಿಕೊಂಡು ಹೋಗಿದ್ದಾರೆ. ಕಳ್ಳರ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.‌ ಅದಕ್ಕೂ ಮೊದಲು ಬೇರೆ ಕಡೆಯೂ ಒಂದು ಗೋವು ತುಂಬಿಕೊಂಡು ಬಂದಿದ್ದು, ಫಾರ್ಚೂನರ್ ವಾಹನದಲ್ಲಿ ಮೂರು ಗೋವುಗಳ ಸಾಗಾಟ ಮಾಡಿದ್ದಾರೆ. ಇದೀಗ ಗೋವುಗಳ ಮಾಲೀಕರು‌ ಧಾರವಾಡ ಉಪನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.

Related Posts

Leave a Comment