Home Kannada ನಾಯಿಯನ್ನು ಬೈಕಿಗೆ ಕಟ್ಟಿ ಎಳೆದೊಯ್ದ ಕಿರಾತಕರು

ನಾಯಿಯನ್ನು ಬೈಕಿಗೆ ಕಟ್ಟಿ ಎಳೆದೊಯ್ದ ಕಿರಾತಕರು

by akash

ಮಂಗಳೂರು: ಕೇರಳದಲ್ಲಿ ನಾಯಿಯೊಂದನ್ನು ರಸ್ತೆಯಲ್ಲಿ ಎಳ್ಕೊಂಡು ಹೋಗಿದ್ದು ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಆದರೆ ಇದೀಗ ಅಂತಹದ್ದೇ ಒಂದು ಮನಕಲಕುವ ಘಟನೆ ಕಡಲ ತಡಿ ಮಂಗಳೂರಿನಲ್ಲಿಯೇ ನಡೆದಿದೆ. ಬಡಪಾಯಿ ಶ್ವಾನವನ್ನು ಬೈಕ್‍ಗೆ ಹಗ್ಗದಲ್ಲಿ ಕಟ್ಟಿ ಹಾಕಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಳ್ಕೊಂಡು ಹೋಗುವ ಈ ವೀಡಿಐಒ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಾರ್ವಜನಿಕರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ. ಮಂಗಳೂರು ಹೊರವಲಯದ ಸುರತ್ಕಲ್ ಬಳಿಯ ಎನ್‍ಐಟಿಕೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು, ಬೈಕಿನಲ್ಲಿ ಮಧ್ಯ ವಯಸ್ಕರಿಬ್ಬರು ಕುಳಿತು ನಾಯಿಯನ್ನು ಬಿಗಿಯಾಗಿ ಕಟ್ಟಿ ಎಳ್ಕೊಂಡು ಹೋಗುವ ದೃಶ್ಯವನ್ನು ಬೇರೆ ಬೈಕ್ ನವರು ವೀಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಈ ಘಟನೆ ಏಪ್ರಿಲ್ 15ರ ರಾತ್ರಿ ಸುಮಾರು 8.30ರ ಸಮಯದಲ್ಲಿ ನಡೆದಿದೆ ಎನ್ನಲಾಗಿದೆ. ಉತ್ತರ ಕರ್ನಾಟಕದ ಮೂಲದ ಮಂಗಳೂರಿನಲ್ಲಿ ಕೂಲಿ ಕಾರ್ಮಿಕರಾಗಿರುವ ಇಬ್ಬರು ಈ ಕೃತ್ಯ ನಡೆಸಿರೋದಾಗಿ ಬೆಳಕಿಗೆ ಬಂದಿದೆ. ಈ ವೀಡಿಯೊ ನೋಡಿ ಪ್ರಾಣಿ ಪ್ರಿಯರೂ ಇದೀಗ ಸಿಡಿದೆದ್ದಿದ್ದು, ಮನುಷ್ಯತ್ವ ಇಲ್ಲದೆ ಈ ರೀತಿಯಾಗಿ ವರ್ತಿಸಿದವರನ್ನು ಬಂಧಿಸುವಂತೆ ಒತ್ತಾಯ ಕೇಳಿ ಬಂದಿದೆ.

Related Posts

Leave a Comment