Home Kannada ಪತಿ ಮೇಲಿನ ಸಿಟ್ಟು: ಮೂರುವರೆ ವರ್ಷದ ಮಗು ಕೊಂದು ನಾಪತ್ತೆ ಕಥೆ ಕಟ್ಟಿದ್ದ ಪಾಪಿ ತಾಯಿ ಅರೆಸ್ಟ್​

ಪತಿ ಮೇಲಿನ ಸಿಟ್ಟು: ಮೂರುವರೆ ವರ್ಷದ ಮಗು ಕೊಂದು ನಾಪತ್ತೆ ಕಥೆ ಕಟ್ಟಿದ್ದ ಪಾಪಿ ತಾಯಿ ಅರೆಸ್ಟ್​

by Eha

ಬೆಂಗಳೂರು: ಮೂರುವರೆ ವರ್ಷದ ಹೆಣ್ಣುಮಗುವನ್ನು ಹೆತ್ತಮ್ಮನೇ ಕೊಲೆಗೈದಿರುವ ಘಟನೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ವಿನುತಾ ಕೊಲೆಯಾದ ಮಗು ಎಂದು ಗುರುತಿಸಲಾಗಿದೆ. ಸುಧಾ ಕೊಲೆ ಮಾಡಿರುವ ಆರೋಪಿಯಾಗಿದ್ದು, ಈಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಮಲ್ಲತ್ತಹಳ್ಳಿಯಲ್ಲಿ ವಾಸವಾಗಿದ್ದ ಸುಧಾ ಟೈಲ್ಸ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರೆ, ಪತಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಮಂಗಳವಾರ ಟಿವಿ ನೋಡುವ ವಿಚಾರದಲ್ಲಿ ಗಂಡ-ಹೆಂಡತಿ ನಡುವೆ ಗಲಾಟೆಯಾಗಿದೆ‌. ಈ ವೇಳೆ ಸಿಟ್ಟಿಗೆದ್ದ ಪತ್ನಿ ಸುಧಾಳು ಪತಿ ಮನೆಯಲ್ಲಿ‌ ಇಲ್ಲದಿರುವಾಗ ವೇಲಿನಿಂದ ಉಸಿರುಗಟ್ಟಿಸಿ ಮಗುವನ್ನು ಕೊಲೆ ಮಾಡಿದ್ದಾಳೆ.

ಬಳಿಕ ಯಾರಿಗೂ ಅನುಮಾನ ಬಾರದಿರಲಿ ಎಂದು ನಾಗರಬಾವಿ ದೀಪಾ ಕಾಂಪ್ಲೆಕ್ಸ್ ಬಳಿಯ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ‌ ಶವವನ್ನು ಎಸೆದು ಬಂದಿದ್ದಳು. ಬಳಿಕ ಪೊಲೀಸ್​ ಠಾಣೆಯಲ್ಲಿ ಮಗು ಕಾಣೆಯಾಗಿದೆ ಎಂದು ದೂರು ನೀಡಿ ಹೈಡ್ರಾಮಾ ಮಾಡಿದ್ದಳು. ಆದರೆ ವಿಚಾರಣೆ ವೇಲೆ ಅನುಮಾನಗೊಂಡ ಪೊಲೀಸರು ಪರಿಶೀಲಿಸಿದಾಗ ತಾಯಿಯೇ ಮಗುವನ್ನು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಮಗುವಿನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ

Related Posts

Leave a Comment