ಹುಬ್ಬಳ್ಳಿ : ಪತ್ನಿ ಮೇಲೆ ಅನುಮಾನ ಪಡುತ್ತಿದ್ದ ವ್ಯಕ್ತಿಯೊಬ್ಬ ಆಕೆಯನ್ನು ನೇಣು ಬಿಗಿದು ಕೊಲೆ ಮಾಡಿದ ಘಟನೆ ನಗರದಲ್ಲಿ ನಡೆದಿದೆ. ಲಿಂಗರಾಜನಗರ ಬಳಿಯ ಹನುಮಂತನಗರ ಬಡಾವಣೆಯ ನಿವಾಸಿ, ಕಾರು ಚಾಲಕ ಮಹದೇವಪ್ಪ ಪತ್ನಿಯನ್ನು ಹತ್ಯೆ ಮಾಡಿದಾತ. ಈತ ಮೊದಲ ಗಂಡನನ್ನು ಬಿಟ್ಟು ಬಂದಿದ್ದ ಕೊಲ್ಕತ್ತಾ ಮೂಲದ ರೇಣುಕಾ ಎಂಬಾಕೆಯನ್ನು ಕಳೆದ ವರ್ಷ ಮದುವೆಯಾಗಿದ್ದ. ಇತ್ತೀಚೆಗೆ ಪತ್ನಿ ಮೇಲೆ ಸಂದೇಹಪಡಲು ಶುರು ಮಾಡಿದ್ದ ಮಹದೇವಪ್ಪ, ಇಂದು ಬೆಳಗ್ಗೆ ಪತ್ನಿಗೆ ನೇಣು ಬಿಗಿದು ಕೊಲೆ ಮಾಡಿದ್ದಾನೆ ಎಂದು ಹೇಳಲಾಗ್ತಿದೆ. ಘಟನೆಯ ನಂತರ ಪತ್ನಿ ರೇಣುಕಾ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಬಿಂಬಿಸಲು ಮಹದೇವಪ್ಪ ಪ್ರಯತ್ನಿಸಿದ್ದ. ಆದರೆ, ಪೊಲೀಸರ ವಿಚಾರಣೆ ವೇಳೆ ನಿಜ ವಿಷಯ ಗೊತ್ತಾಗಿದೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು, ತನಿಖೆ ಮುಂದುವರೆಸಿದ್ದಾರೆ. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪತ್ನಿ ಮೇಲೆ ಅನುಮಾನ: ನೇಣು ಬಿಗಿದು ಕೊಲೆಗೈದ ಪತಿ
previous post