Home Kannada ಪಶ್ಚಿಮ ಬಂಗಾಳದ ಖರ್ದಹದಲ್ಲಿ ಬಾಂಬ್ ಸ್ಫೋಟ, ಓರ್ವ ಸಾವು

ಪಶ್ಚಿಮ ಬಂಗಾಳದ ಖರ್ದಹದಲ್ಲಿ ಬಾಂಬ್ ಸ್ಫೋಟ, ಓರ್ವ ಸಾವು

by akash

ಖರ್ದಹ (ಉತ್ತರ 24 ಪರಗಣ ಜಿಲ್ಲೆ): ಪಶ್ಚಿಮ ಬಂಗಾಳದಲ್ಲಿ ಆರನೇ ಹಂತದ ವಿಧಾನಸಭೆ ಚುನಾವಣೆಗೆ ಕೆಲದಿನಗಳು ಬಾಕಿ ಇರುವಾಗ ಉತ್ತರ 24 ಪರಗಣ ಜಿಲ್ಲೆಯ ಖರ್ದಹದಲ್ಲಿ ಬಾಂಬ್ ಸ್ಫೋಟಗೊಂಡಿದ್ದು, ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ. ಘಟನೆಯಲ್ಲಿ ಇನ್ನೋರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ. ಗಾಯಾಳುವನ್ನು ಚಿಕಿತ್ಸೆಗಾಗಿ ಕೊಲ್ಕತ್ತಾಗೆ ಕರೆದೊಯ್ಯಲಾಗಿದೆ. ಈ ಸ್ಫೋಟವು ಬಾಂಬ್ ತಯಾರಿಕೆಯ ಪ್ರಕ್ರಿಯೆಯ ವೇಳೆ ಜರುಗಿರಬಹುದು ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಪ.ಬಂಗಾಳದ 294 ವಿಧಾನಸಭೆ ಕ್ಷೇತ್ರಗಳಿಗೆ 8 ಹಂತಗಳಲ್ಲಿ ಮತದಾನ ನಡೆಯುತ್ತಿದ್ದು, ಈಗಾಗಲೇ 5 ಹಂತದ ಮತದಾನ ಮುಕ್ತಾಯಗೊಂಡಿದೆ. ನಾಲ್ಕನೇ ಹಂತದ ಮತದಾನದ ವೇಳೆ ಕೂಚ್​ ಬಿಹಾರ್​ದಲ್ಲಿ ಹಿಂಸಾಚಾರ ನಡೆದಿತ್ತು. ಕೂಚ್ ಬಿಹಾರ್ ಜಿಲ್ಲೆಯ ಶೀತಲ್​​ಕೂಚಿಯ ಪಥಂತುಲಿ ಪ್ರದೇಶದಲ್ಲಿರುವ ಮತಗಟ್ಟೆ ಎದುರು ವೋಟ್​ ಮಾಡಲು ನಿಂತಿದ್ದ ಮತದಾರನನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದಿದ್ದರು.

Related Posts

Leave a Comment