Home Kannada ಪುತ್ತೂರು: ಜ್ಯುವೆಲ್ಲರ್ಸ್​ಗೆ ನುಗ್ಗಿ ಚಿನ್ನಾಭರಣ ಕದ್ದೊಯ್ದ ಕಳ್ಳರು

ಪುತ್ತೂರು: ಜ್ಯುವೆಲ್ಲರ್ಸ್​ಗೆ ನುಗ್ಗಿ ಚಿನ್ನಾಭರಣ ಕದ್ದೊಯ್ದ ಕಳ್ಳರು

by Eha

ಪುತ್ತೂರು (ದಕ್ಷಿಣಕನ್ನಡ) : ಪುತ್ತೂರಿನ ಪ್ರತಿಷ್ಠಿತ ಶ್ರೀಧರ್ ಭಟ್ ಬ್ರದರ್ಸ್ ಅಂಗಡಿ ಪಕ್ಕದಲ್ಲಿರುವ ಶ್ರೀಧರ್ ಭಟ್ ಜ್ಯುವೆಲ್ಲರ್ಸ್​ನ ರೋಲಿಂಗ್ ಶೆಟರ್ ಒಡೆದು ಕಳ್ಳತನ ಮಾಡಲಾಗಿದೆ. ಶ್ರೀಧರ್ ಭಟ್ ಜ್ಯುವೆಲ್ಲರ್ಸ್​ನ ರೋಲಿಂಗ್ ಶೆಟರ್ ಹಾಗೂ ಒಳಗಿನ ಸ್ಲೈಡ್ ಗೇಟ್​​​ನ ಬೀಗ ಒಡೆದು ಒಳ ನುಗ್ಗಿದ ಖದೀಮರು, ಚಿನ್ನಾಭರಣ ಹಾಗೂ ಬೆಳ್ಳಿಯ ವಸ್ತುಗಳನ್ನು ಕದ್ದು ಪರಾರಿಯಾಗಿದ್ದಾರೆ. ಪುತ್ತೂರು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

Related Posts

Leave a Comment