Home Kannada ಪುನಲೂರಿನಲ್ಲಿ ಯುವಕನ ಕಡಿದು ಕೊಲೆಗೈದ ವ್ಯಕ್ತಿ: ಘಟನೆಯ ಸಿಸಿಟಿವಿ ದೃಶ್ಯ

ಪುನಲೂರಿನಲ್ಲಿ ಯುವಕನ ಕಡಿದು ಕೊಲೆಗೈದ ವ್ಯಕ್ತಿ: ಘಟನೆಯ ಸಿಸಿಟಿವಿ ದೃಶ್ಯ

by akash

ಕೊಲ್ಲಂ (ಕೇರಳ): ಇಬ್ಬರ ನಡುವೆ ವಾಗ್ವಾದನಡೆದು ಯುವಕನೊಬ್ಬನನ್ನು ಕಡಿದು ಕೊಂದ ಘಟನೆ ಜಿಲ್ಲೆಯ ಪುನಲೂರಿನಲ್ಲಿ ನಡೆದಿದೆ. ಮೃತ ಯುವಕನನ್ನುನಗರದ ಚೆಮ್ಮಂತೂರು ಸಂತೋಷ್ ಭವನ್ ನಿವಾಸಿ ಸನಿಲ್ ಕುಮಾರ್ ( 39) ಎಂದು ಗುರುತಿಸಲಾಗಿದೆ. ಚೆಮ್ಮಂತೂರಿನ ಕುದಿರಚಿರ ರಸ್ತೆಯಲ್ಲಿ ಮಂಗಳವಾರ ರಾತ್ರಿ ಘಟನೆ ನಡೆದಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಕೊಲೆ ಆರೋಪಿ ಚೆಮ್ಮಂತೂರು ಪಕಿಡಿ ನಿವಾಸಿ ಸುರೇಶ್ ಎಂಬಾತನನ್ನು ಬಂಧಿಸಿದ್ದಾರೆ. ಹಣದ ವಿಚಾರದಲ್ಲಿ ಜಗಳ ನಡೆದು ಯುವಕನನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆಯಾದ ಯುವಕನ ಮೃತದೇಹವನ್ನು ಪುನಲೂರು ಸರ್ಕಾರಿ ಆಸ್ಪತ್ರೆಯಲ್ಲಿ ಇಡಲಾಗಿದೆ.

Related Posts

Leave a Comment