Home Kannada ಪೂಜೆ ಮಾಡುವ ನೆಪದಲ್ಲಿ ಮಹಿಳೆಯ ಒಡವೆ ದೋಚಿದ್ದ ಆರೋಪಿಗಳು ಅಂದರ್​

ಪೂಜೆ ಮಾಡುವ ನೆಪದಲ್ಲಿ ಮಹಿಳೆಯ ಒಡವೆ ದೋಚಿದ್ದ ಆರೋಪಿಗಳು ಅಂದರ್​

by Eha

ನೆಲಮಂಗಲ: ಓಂ ಶಕ್ತಿ ವೇಷ ಧರಿಸಿ ಹೋಟೆಲ್​ ಮಾಲೀಕರಾದ ಭೂಪತ್ತಮ್ಮ ಎಂಬುವವರ ಒಡೆವೆಗಳನ್ನು ದೋಚಿ ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾದನಾಯಕನಹಳ್ಳಿ ಪೊಲೀಸರು ನಾಲ್ಕು ಆರೋಪಿಗಳನ್ನು ಬಂಧಿಸಿದ್ದಾರೆ. ​ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಗುಜ್ಜಲ ಭಾರತಿ (45), ರಾಗೆ ಲಕ್ಷ್ಮಿದೇವಿ (39), ನಾಗರಾಜ್ (45), ರಂಜಿತ್ (26) ಬಂಧಿತ ಆರೋಪಿಗಳು. ಇವರು ಬೆಂಗಳೂರು ಉತ್ತರ ತಾಲೂಕಿನ ಹುಸ್ಕೂರು ನಿವಾಸಿ ಮತ್ತು ಹೋಟೆಲ್​ ನಡೆಸುತ್ತಿದ್ದ ಭೂಪತ್ತಮ್ಮ ಎಂಬ ಮಹಿಳೆಯ ಒಡವೆ ದೋಚಿ ಪರಾರಿಯಾಗಿದ್ದರು. ಬೆಂಗಳೂರು ಉತ್ತರ ತಾಲೂಕಿನ ತೂಬಗೆರೆ ತಾಲೂಕಿನ ಹುಸ್ಕೂರು ಗ್ರಾಮದ ರಸ್ತೆ ಪಕ್ಕದಲ್ಲಿ ಭೂಪತ್ತಮ್ಮ ಎಂಬ ಮಹಿಳೆ ಹೋಟೆಲ್ ನಡೆಸುತ್ತಿದ್ದರು. ರೋಲ್ಡ್​ ಗೋಲ್ಡ್ ಚಿನ್ನ ಮಾರುತ್ತಾ ಊರೂರು ಅಲೆಯುವ ಆರೋಪಿಗಳ ಗ್ಯಾಂಗ್ ತಿಂಡಿ ತಿನ್ನಲೆಂದು ಹೋಟೆಲ್​ಗೆ ಬಂದಿದ್ದಾರೆ.

ಈ ವೇಳೆ, ಹೋಟೆಲ್​ ಮಾಲೀಕರಾದ ಭೂಪತ್ತಮ್ಮನ ಜೊತೆ ಮಾತನಾಡುತ್ತಾ ನಿಮ್ಮ ಯಜಮಾನನಿಗೆ ಅಸ್ತಮಾ ಕಾಯಿಲೆ ಇದೆ. ಪೂಜೆ ಮಾಡಿ ಸರಿ ಮಾಡುವುದಾಗಿ ಹೇಳಿದ್ದಾರೆ. ಓಂ ಶಕ್ತಿ ವೇಷಧಾರಿಗಳಾದ ಮಹಿಳೆಯರ ಮಾತು ನಂಬಿದ ಭೂಪತ್ತಮ್ಮ ಮನೆಗೆ ಕರೆದುಕೊಂಡು ಹೋಗಿ ಪೂಜೆ ಮಾಡಿಸಿದ್ದಾಳೆ. ಪೂಜೆಗಾಗಿ 25 ಸಾವಿರ ಹಣವನ್ನು ತೆಗೆದುಕೊಂಡಿದ್ದಾರೆ. ನಂತರ ಮನೆಯಲ್ಲಿರುವ ಒಡವೆಗಳನ್ನು ಡಬ್ಬಿಗೆ ಹಾಕಿ ಪೂಜೆ ಮಾಡುವಂತೆ ಹೇಳಿ ಅಲ್ಲಿಂದ ಆರೋಪಿಗಳ ಒಡವೆ ಜೊತೆ ಪರಾರಿಯಾಗಿದ್ದಾರೆ. ಡಬ್ಬಿ ತೆಗೆದು ನೋಡಿದಾಗ ಖಾಲಿ ಡಬ್ಬಿ ಮಾತ್ರ ಇದ್ದು, ಭೂಪತ್ತಮ್ಮ ಮೋಸದ ಜಾಲಕ್ಕೆ ಬಿದ್ದಿರೋದು ಗೊತ್ತಾಗಿದೆ. ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ತನಿಖೆ ಕೈಗೊಂಡ ಪೊಲೀಸರು, ಟವರ್ ಲೋಕೇಷನ್ ಆಧಾರದ ಮೇಲೆ ಆರೋಪಿಗಳನ್ನು ಬೆಂಗಳೂರಿನ ನಾಗರಭಾವಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.

Related Posts

Leave a Comment