Home Kannada ಪ್ರಯಾಣಿಕರೇ ಎಚ್ಚರ! ರೈಲ್ವೆ ಆವರಣದಲ್ಲಿ ಮಾಸ್ಕ್​ ಧರಿಸದಿದ್ದರೆ 500 ರೂ. ದಂಡ!

ಪ್ರಯಾಣಿಕರೇ ಎಚ್ಚರ! ರೈಲ್ವೆ ಆವರಣದಲ್ಲಿ ಮಾಸ್ಕ್​ ಧರಿಸದಿದ್ದರೆ 500 ರೂ. ದಂಡ!

by akash

ನವದೆಹಲಿ: ದೇಶಾದ್ಯಂತ ಕೊರೊನಾ ಎರಡನೇ ಅಲೆ ಪ್ರಕರಣಗಳ ಸಂಖ್ಯೆ ಯಥೇಚ್ಛವಾಗಿ ಏರಿಕೆ ಆಗುತ್ತಿದ್ದು, ಭಾರತೀಯ ರೈಲ್ವೆ ಮಂಡಳಿಯು ತನ್ನ ಆವರಣದಲ್ಲಿ ಮಾಸ್ಕ್​ ಧರಿಸದವರಿಗೆ ದಂಡ ವಿಧಿಸುವುದಾಗಿ ತಿಳಿಸಿದೆ. ಕೊರೊನಾ ಸೋಂಕಿನ (ಕೋವಿಡ್ -19) ವಿರುದ್ಧ ಕೇಂದ್ರ ಕೈಗೊಂಡ ತಡೆಗಟ್ಟುವ ಕ್ರಮಗಳಿಗೆ ಅನುಗುಣವಾಗಿ, ರೈಲುಗಳು ಮತ್ತು ನಿಲ್ದಾಣಗಳ ಆವರಣದಲ್ಲಿ ಫೇಸ್ ಮಾಸ್ಕ್ ಮಾನದಂಡಗಳನ್ನು ಉಲ್ಲಂಘಿಸುತ್ತಿರುವುದು ಕಂಡುಬರುತ್ತಿದೆ. ಹೀಗಾಗಿ, ಮಾಸ್ಕ್​​ ಧರಿಸದೆ ರೈಲ್ವೆ ನಿಲ್ದಾಣದ ವ್ಯಾಪ್ತಿಯಲ್ಲಿ ಓಡಾಡುವ ಜನರಿಗೆ 500 ರೂ. ದಂಡ ವಿಧಿಸಲಾಗುತ್ತಿದೆ ಎಂದು ಹೇಳಿದೆ. ಕಳೆದ 24 ಗಂಟೆಗಳಲ್ಲಿ 2,34,692 ಹೊಸ ಕೋವಿಡ್ ಪ್ರಕರಣಗಳ ಕಂಡುಬಂದಿದ್ದು, 1,341 ಜನ ಸೋಂಕಿಗೆ ಬಲಿಯಾಗಿದ್ದಾರೆ. ಭಾರತದಲ್ಲಿ ಸಕ್ರಿಯ ಪ್ರಕರಣಗಳು ಈಗ 16,79,740 ಆಗಿದೆ. ಒಟ್ಟು ಪ್ರಕರಣಗಳ ಸಂಖ್ಯೆ 1,45,26,609 ದಾಖಲಾಗಿದೆ. ಗುಣಮುಖರಾದವರ ಸಂಖ್ಯೆ 1,26,71,220 ತಲುಪಿದ್ದರೇ ಸಾವಿನ ಸಂಖ್ಯೆ 1,75,649ರಷ್ಟಿದೆ. ಮಹಾರಾಷ್ಟ್ರ, ಉತ್ತರ ಪ್ರದೇಶ, ದೆಹಲಿ, ಛತ್ತೀಸ್‌ಗಢ, ಕರ್ನಾಟಕ, ಮಧ್ಯಪ್ರದೇಶ, ಕೇರಳ, ಗುಜರಾತ್, ತಮಿಳುನಾಡು ಮತ್ತು ರಾಜಸ್ಥಾನ ಸೇರಿದಂತೆ ಹತ್ತು ರಾಜ್ಯಗಳು ಶೇ 79.32ರಷ್ಟು ಹೊಸ ಪ್ರಕರಣಗಳು ವರದಿಯಾಗಿವೆ.

Related Posts

Leave a Comment