Home Kannada ಫೇಸ್‌ಬುಕ್‌ನಲ್ಲಿ ಆರೋಪಿಯನ್ನು ಗುರುತಿಸಿದ ಅತ್ಯಾಚಾರ ಸಂತ್ರಸ್ತೆ : 17 ವರ್ಷಗಳ ಬಳಿಕ ಕೇಸ್​ ದಾಖಲು

ಫೇಸ್‌ಬುಕ್‌ನಲ್ಲಿ ಆರೋಪಿಯನ್ನು ಗುರುತಿಸಿದ ಅತ್ಯಾಚಾರ ಸಂತ್ರಸ್ತೆ : 17 ವರ್ಷಗಳ ಬಳಿಕ ಕೇಸ್​ ದಾಖಲು

by Eha

ಇಂದೋರ್​(ಮಧ್ಯಪ್ರದೇಶ) : 17 ವರ್ಷಗಳ ಹಿಂದೆ ಅತ್ಯಾಚಾರಕ್ಕೊಳಗಾಗಿದ್ದ ಮಧ್ಯಪ್ರದೇಶ ಇಂದೋರ್ ಮೂಲದ ಮಹಿಳೆಯೊಬ್ಬರು ಈಗ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಮಹಿಳೆ ಬಾಲ್ಯದಲ್ಲಿರುವಾಗಲೇ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿದ್ದ. ಆದರೆ, ಆಗ ಅವರಿಗೆ ಆರೋಪಿಯ ಹೆಸರು, ವಿಳಾಸ ಸೇರಿದಂತೆ ಯಾವ ಗುರುತೂ ತಿಳಿದಿರಲಿಲ್ಲ. 2020ರಲ್ಲಿ ಫೇಸ್‌ಬುಕ್‌ನಲ್ಲಿ ಆರೋಪಿಯ ಪ್ರೊಫೈಲ್​ ನೋಡಿ ದೂರು ನೀಡಲು ನಿರ್ಧರಿಸಿದ್ದಾರೆ. ಸಂತ್ರಸ್ತೆಯ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸುತ್ತಿರುವುದಾಗಿ ಇಂದೋರ್​ ಮಹಿಳಾ ಪೊಲೀಸ್​ ಠಾಣೆಯ ಎಸ್​ಹೆಚ್​ಒ ಜ್ಯೋತಿ ಶರ್ಮಾ ತಿಳಿಸಿದ್ದಾರೆ.

Related Posts

Leave a Comment