Home Kannada ಫೋರ್ಟ್ ವಿದ್ಯಾದಾಯಿನಿ ಸಭಾದ ವತಿಯಿಂದ ಗುರು ಪೂರ್ಣಿಮಾಚರಣೆ.

ಫೋರ್ಟ್ ವಿದ್ಯಾದಾಯಿನಿ ಸಭಾದ ವತಿಯಿಂದ ಗುರು ಪೂರ್ಣಿಮಾಚರಣೆ.

by akash

ವರದಿ: ಉಮೇಶ್ ಅಂಚನ್. ಶತಮಾನೋತ್ಸವವನ್ನಾಚರಿದ್ದ ವಿದ್ಯಾದಾಯಿನಿ ಸಭಾ, ಫೋರ್ಟ್ ಮುಂಬಯಿ ವತಿಯಿಂದ ಶನಿವಾರ ಜು. 24 ರಂದು ಬೆಳಿಗ್ಗೆ ಗುರು ಪೂರ್ಣಿಮಾ ಉತ್ಸವವನ್ನು ಸಂಸ್ಥೆಯ ಕಛೇರಿಯಲ್ಲಿ ಸಾಂಕೇತಿಕವಾಗಿ ಕೊರೊನಾ ನಿಯಮ ಪಾಲನೆಯೊಂದಿಗೆ ಆಚರಿಸಲಾಯಿತು. ವಿದ್ಯಾದಾಯಿನಿ ಭಜನಾ ಸಮಿತಿಯ ಅದ್ಯಕ್ಷ ಸದಾನಂದ ಪೂಜಾರಿಯವರ ನೇತ್ರತ್ವದಲ್ಲಿ ಸದಸ್ಯರಿಂದ ಭಜನೆ , ಪುರೋಹಿತ ಹೆಜಮಾಡಿ ಹರೀಶ್ ಶಾಂತಿಯವರಿಂದ ಸದ್ಗುರು ಶ್ರೀ ನಾರಾಯಣ ಗುರು ಮಂಟಪದ ಶ್ರಂಗಾರ ನಡೆದು ಗುರು ಪೂಜೆ ಹಾಗೂ ಮಹಾ ಮಂಗಳಾರತಿಯು ಸಂಸ್ಥೆಯ ಅದ್ಯಕ್ಷ ಪುರುಷೋತ್ತಮ. ಎಸ್.ಕೋಟ್ಯಾನ್ ರವರ ಉಪಸ್ಥಿತಿಯಲ್ಲಿ ನಡೆಯಿತು. ಪೂಜಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸರ್ವರನ್ನೂ ಅದ್ಯಕ್ಷರು ಸ್ವಾಗತಿಸಿದರು. ಕೊನೆಯಲ್ಲಿ ಪ್ರಸಾದ ವಿತರಣೆ ನಡೆಯಿತು. ಕೆನರಾ ವಿದ್ಯಾದಾಯಿನಿ ರಾತ್ರಿ ಶಾಲೆಯ ಶಾಲಾಧಿಕಾರಿ ಡಾ.ಪ್ರಕಾಶ್ ಮೂಡಬಿದ್ರೆ, ಸಂಸ್ಥೆಯ ಜತೆ ಕಾರ್ಯದರ್ಶಿ ಶರತ್ ಪೂಜಾರಿ,ವಿದ್ಯಾದಾಯಿನಿ ಸೇವಾದಳದ ಜಿ.ಒ.ಸಿ ಸುರೇಶ್ ಪೂಜಾರಿ, ಸತೀಶ್ ಶೆಟ್ಟಿ, ಜಗನ್ನಾಥ್ ಅಮೀನ್, ಪ್ರಶಾಂತ್ ಕರ್ಕೇರ, ಉಮೇಶ್ ಪೂಜಾರಿ, ಸಂತೋಷ್ ಪೂಜಾರಿ, ಅಶೋಕ್ ಪೂಜಾರಿ, ಗಣೇಶ್ ಪೂಜಾರಿ, ದಿನೇಶ್ ಪೂಜಾರಿ, ರಾಜು ಪೂಜಾರಿ,ರಾಜೇಶ್ ಸುವರ್ಣ, ಆಕಾಶ್ ಸುವರ್ಣ, ಜಯ ಪೂಜಾರಿ ಮೊದಲಾದವರು ಉಪಸ್ಥಿತರಿದ್ದು ಪೂಜಾಕಾರ್ಯದಲ್ಲಿ ಸಹಕರಿಸಿದ್ದರು.

Related Posts

Leave a Comment