Home Kannada ಬಂಟರ ಸಂಘ ಮುಂಬಯಿಯ ಬಂಟರ ವಾಣಿಯ ಕಾರ್ಯಾಧ್ಯಕ್ಷರಾಗಿ ರವೀಂದ್ರನಾಥ ಎಂ ಭಂಡಾರಿ

ಬಂಟರ ಸಂಘ ಮುಂಬಯಿಯ ಬಂಟರ ವಾಣಿಯ ಕಾರ್ಯಾಧ್ಯಕ್ಷರಾಗಿ ರವೀಂದ್ರನಾಥ ಎಂ ಭಂಡಾರಿ

by Eha

ಮುಂಬಯಿ  : ಬಂಟರ ಸಂಘ ಮುಂಬಯಿಯ ಮುಖವಾಣಿ ’ಬಂಟರ ವಾಣಿ’  ಮಾಸಿಕದ ಕಾರ್ಯಾಧ್ಯಕ್ಷರಾಗಿ ರವೀಂದ್ರನಾಥ ಮಹಬಲ ಭಂಡಾರಿ ಯವರು ಆಯ್ಕೆಯಾಗಿದ್ದಾರೆ.ವೆಲ್ಕಮ್ ಪ್ಯಾಕೇಜಿಂಗ್ ಅಂಡ್ ಇಂಡಸ್ಟ್ರೀಸ್ನ ಮಾಲಕರಾಗಿರುವ ಇವರು ಬಂಟರ ಸಂಘದಲ್ಲಿ ದೀರ್ಘ ಕಾಲದಿಂದ ವಿವಿಧ ಪದವಿಯನ್ನು ಅಲಂಕರಿಸಿ ಸೇವಾ ನಿರತರಾಗಿದ್ದಾರೆ. ಪದ್ಮನಾಭ ಪಯ್ಯಡೆಯವರ ಅಧ್ಯಕ್ಷೀಯ ಕಾಲಾವಧಿಯಲ್ಲಿ ಬಂಟರ ಸಂಘದ ಜ್ನಾನ ಮಂದಿರದ ಕಾರ್ಯಾಧ್ಯಕ್ಷರಾಗಿ ಶ್ರೀ ವಿಷ್ಣೂಮೂರ್ತಿ ದೇವಸ್ಥಾನದ ಸಮಗ್ರ ಅಭಿವೃದ್ದಿಗೆ ಶ್ರಮಿಸಿದವರು. ತನ್ನ ನಿರ್ಗಮನದ ಸಂದರ್ಭದಲ್ಲಿ ಭಕ್ತರಿಂದ ದೇಣಿಗೆಯನ್ನು ಸಂಗ್ರಹಿಸಿ ಅದರಿಂದ ಶ್ರೀ ದೇವರಿಗೆ ಸುವರ್ಣ ಪುಷ್ಪ ಹಾರವನ್ನು ಸಮರ್ಪಿಸಿದ್ದಾರೆ. ಇವರು ದಾರ್ಮಿಕ ಕ್ಷೇತ್ರದಲ್ಲಿ ಮಾತ್ರವಲ್ಲದೆ ಒರ್ವ ಕಲಾಭಿಮಾನಿಯಾಗಿ, ಸಮಾಜ ಸೇವಕರಾಗಿ ಹಾಗೂ ಕೊಡುಗೈ ದಾನಿಯಾಗಿ ಗುರುತಿಸಿಕೊಂಡಿರುವರು.  ಸದಾ ಲವಲವಿಕೆಯಿಂದ ಶಿಸ್ತಿನ ಜೀವನವನ್ನು ನಡೆಸುತ್ತಿದಾರೆ. ಕಲಾಭಿಮಾನಿಯಾಗಿ ಯಾವುದೇ ಪ್ರಚಾರ ಬಯಸದೆ ಕಲಾವಿದರ ಕಣ್ಣೀರನ್ನು ಒರಸುವ ಸೇವೆಯನ್ನು ಮಾಡುತ್ತಿರುವ  ರವೀಂದ್ರನಾಥ ಮಹಬಲ ಭಂಡಾರಿ ’ಬಂಟರ ವಾಣಿ’  ಮಾಸಿಕದ ಕಾರ್ಯಾಧ್ಯಕ್ಷರಾಗಿ ಹೊಸ ಜವಾಬ್ಧಾರಿಯನ್ನು ವಹಿಸಿರುವರು

ದಿನೇಶ್ ಕುಲಾಲ್

Related Posts

Leave a Comment