Home Kannada ಬಂಟ್ವಾಳ: ತಪಾಸಣೆ ವೇಳೆ ಪೊಲೀಸರ ಮೇಲೆ ಗುಂಡು ಹಾರಿಸಿದ ಕೇರಳ ಮೂಲದ ಕ್ರಿಮಿನಲ್​ಗಳು

ಬಂಟ್ವಾಳ: ತಪಾಸಣೆ ವೇಳೆ ಪೊಲೀಸರ ಮೇಲೆ ಗುಂಡು ಹಾರಿಸಿದ ಕೇರಳ ಮೂಲದ ಕ್ರಿಮಿನಲ್​ಗಳು

by Eha

ಬಂಟ್ವಾಳ: ತಾಲೂಕಿನ ಸಾಲೆತ್ತೂರು ಚೆಕ್ ಪೋಸ್ಟ್​​​ನಲ್ಲಿ ಕಾರು ತಪಾಸಣೆ ವೇಳೆ ಕೇರಳದ ಕ್ರಿಮಿನಲ್​​ಗಳ ತಂಡವೊಂದು ಪೊಲೀಸರ ಮೇಲೆ ಗುಂಡು ಹಾರಿಸಿದ ಘಟನೆ ಇಂದು ನಸುಕಿನ ಜಾವ ನಡೆದಿದೆ. ಕೇರಳದ ಕಾಸರಗೋಡು ಮೂಲದ ಕುಖ್ಯಾತ ಕ್ರಿಮಿನಲ್​​ಗಳ ಗ್ಯಾಂಗ್ ಒಂದು ಈ ಕೃತ್ಯವೆಸಗಿದೆ ಎನ್ನಲಾಗಿದೆ. ಈ ಸಂಬಂಧ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಆರೋಪಿಗಳಿಂದ ಕಾರು ಮತ್ತು ಪಿಸ್ತೂಲ್ ಹಾಗೂ ಕೈಗೊಡಲಿ ಒಂದನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಕಾರಿನಲ್ಲಿ ಐವರು ಇದ್ದರು ಎನ್ನಲಾಗಿದ್ದು, ಮೂವರನ್ನ ವಶಕ್ಕೆ ಪಡೆಯಲಾಗಿದೆ. ಕೇರಳದಲ್ಲಿ ಇದೇ ರೀತಿ ಗುಂಡಿನ ದಾಳಿ ನಡೆಸಿ ವಿಟ್ಲ ಮೂಲಕ ಪರಾರಿಯಾಗಲು ಮುಂದಾಗುತ್ತಿದ್ದಂತೆ ವಿಟ್ಲ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ವಿಟ್ಲ ಎಸ್​ಐ ನೇತೃತ್ವದ ತಂಡ ಆರೋಪಿಗಳನ್ನು ಅಡ್ಡಗಟ್ಟಲು ಮುಂದಾದಾಗ ಅವರ ಮೇಲೆ ದಾಳಿಗೆ ಮುಂದಾಗಿದ್ದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್ ತಿಳಿಸಿದ್ದಾರೆ.

Related Posts

Leave a Comment