Home Kannada ಬನಿಯನ್ನೇ ಮಾಸ್ಕ್ ಮಾಡಿಸಿದ ಪೊಲೀಸರು- ಮಾಸ್ಕ್ ಧರಿಸದ್ದಕ್ಕೆ ಶಿಕ್ಷೆ

ಬನಿಯನ್ನೇ ಮಾಸ್ಕ್ ಮಾಡಿಸಿದ ಪೊಲೀಸರು- ಮಾಸ್ಕ್ ಧರಿಸದ್ದಕ್ಕೆ ಶಿಕ್ಷೆ

by akash

ಹಾವೇರಿ: ಕೊರೊನಾ ಎರಡನೇ ಅಲೆ ತಾಂಡವಾಡುತ್ತಿದ್ದು, ನೂರಾರು ಜನ ಆಕ್ಸಿಜನ ಸಿಗದೆ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇಷ್ಟಾದರೂ ಕೆಲವರು ಮಾತ್ರ ಇನ್ನೂ ಬುದ್ಧಿ ಕಲಿಯುತ್ತಿಲ್ಲ ಮಾಸ್ಕ್ ಧರಿಸುವುದು ಸೇರಿದಂತೆ ಕೊರೊನಾ ನಿಯಮ ಪಾಲಿಸುತ್ತಿಲ್ಲ. ಸರ್ಕಾರ ಟಫ್ ರೂಲ್ಸ್ ಜಾರಿ ಮಾಡಿದರೂ ಕ್ಯಾರೆ ಅನ್ನುತ್ತಿಲ್ಲ. ಹೀಗಾಗಿ ಮಾಸ್ಕ್ ಧರಿಸದವನಿಗೆ ಪೊಲೀಸರು ಪಾಠ ಕಲಿಸಿದ್ದು, ಬನಿಯನ್ನೇ ಮಾಸ್ಕ್ ಮಾಡಿಸಿದ್ದಾರೆ. ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಮಾಸ್ಕ್ ಧರಿಸದೆ ಹೋಗುತ್ತಿದ್ದ ವ್ಯಕ್ತಿಗೆ ಶರ್ಟ್ ಬಿಚ್ಚಿಸಿ, ಬನಿಯನ್ನು ಮಾಸ್ಕ್ ನಂತೆ ಕಟ್ಟಿಕೊಂಡು ಹೋಗುವಂತೆ ಪೊಲೀಸರು ಸೂಚಿಸಿದ್ದಾರೆ. ಇಟ್ಟಿಗೆ ಹೇರಿಕೊಂಡು ಟ್ರ್ಯಾಕ್ಟರ್ ನಲ್ಲಿ ಕುಳಿತು ಮಾಸ್ಕ್ ಧರಿಸಿದೆ ಹೋಗುತ್ತಿದ್ದವರಿಗೆ ಪೊಲೀಸರು ತಡೆದು ಚೆನ್ನಾಗಿ ಪಾಠ ಕಲಿಸಿದ್ದಾರೆ. ಬನಿಯನ್‍ನ್ನೇ ಮುಖಕ್ಕೆ ಕಟ್ಟಿಕೊಂಡು ಮಾಸ್ಕ್ ನಂತೆ ಧರಿಸಿ ವ್ಯಕ್ತಿ ತೆರಳಿದ್ದಾನೆ. ಕೊರೊನಾ ಪ್ರಕರಣಗಳು ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಿದ್ದು, ಜನ ಮಾತ್ರ ಬುದ್ಧಿ ಕಲಿಯುತ್ತಿಲ್ಲ. ಹೀಗಾಗಿ ಪೊಲೀಸರು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.

Related Posts

Leave a Comment