Home Kannada ಬಳ್ಳಾರಿ : ಜಪ್ತಿ ಮಾಡಿದ್ದ ಮದ್ಯ, ಬೆಲ್ಲದ ಕೊಳೆ‌ ನಾಶ

ಬಳ್ಳಾರಿ : ಜಪ್ತಿ ಮಾಡಿದ್ದ ಮದ್ಯ, ಬೆಲ್ಲದ ಕೊಳೆ‌ ನಾಶ

by Eha

ಬಳ್ಳಾರಿ : ಅಬಕಾರಿ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ‌ ನಗರದ ನಲ್ಲಚೆರವು ಪ್ರದೇಶದ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಮಂಗಳವಾರ ಜಪ್ತಿ ಮಾಡಿದ್ದ ಮದ್ಯ, ಬೀರ್, ಸೇಂದಿ, ಕಳ್ಳಭಟ್ಟಿ ಸಾರಾಯಿ ಮತ್ತು ಬೆಲ್ಲದ ಕೊಳೆ ನಾಶಪಡಿಸಲಾಗಿದೆ. ಅಬಕಾರಿ ಉಪ ಅಧೀಕ್ಷಕರಾದ ಬಿ ಎಸ್ ಪೂಜಾರ, ಕೆಎಸ್​ಬಿಸಿಎಲ್ ಡಿಪೋ ಮ್ಯಾನೇಜರ್, ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಬಳ್ಳಾರಿ ವಲಯ ನಂಬರ್-1 ಅಧಿಕಾರಿ ಮತ್ತು ಸಿಬ್ಬಂದಿ ಸಮ್ಮುಖದಲ್ಲಿ ನಾಶಪಡಿಸಲಾಗಿದೆ. 30 ಪ್ರಕರಣಗಳಲ್ಲಿ ಜಪ್ತಿ ಮಾಡಿದ 4,133 ಲೀಟರ್ ಮದ್ಯ,1007 ಲೀಟರ್ ಬೀರ್, 0. 275 ಲ್ಯಾಬ್, 1 ಲೀಟರ್ ಸೇಂದಿ,72 ಲೀಟರ್ ಕಳ್ಳಬಟ್ಟಿ, ಸರಾಯಿ ಹಾಗೂ 80 ಲೀಟರ್ ಬೆಲ್ಲದ ಕೊಳೆ ನಾಶಪಡಿಸಲಾಗಿದೆ. ಈ ಸಂದರ್ಭದಲ್ಲಿ ‌ಅಬಕಾರಿ ಇಲಾಖೆಯ ಅಧಿಕಾರಿಗಳು ‌ಮತ್ತು ಸಿಬ್ಬಂದಿ ಇದ್ದರು.

Related Posts

Leave a Comment