Home Kannada ಬಳ್ಳಾರಿ: ಸಿಸಿಟಿವಿಯಲ್ಲಿ ಸೆರೆಯಾದ ಬೈಕ್​ ಕಳ್ಳ – ವಿಡಿಯೋ ವೈರಲ್

ಬಳ್ಳಾರಿ: ಸಿಸಿಟಿವಿಯಲ್ಲಿ ಸೆರೆಯಾದ ಬೈಕ್​ ಕಳ್ಳ – ವಿಡಿಯೋ ವೈರಲ್

by Eha

ಬಳ್ಳಾರಿ: ನಗರದ ಕನಕದುರ್ಗಮ್ಮ ದೇಗುಲ ಸಮೀಪದ ಮ್ಯಾಕ್ಸ್ ಶಾಪಿಂಗ್ ಕಾಂಪ್ಲೆಕ್ಸ್ ಮುಂಭಾಗ ನಿಲುಗಡೆಯಾಗಿದ್ದ ಬೈಕ್​ವೊಂದನ್ನ ಕಳ್ಳತನ ಮಾಡಿಕೊಂಡು ಹೋಗುವ ದೃಶ್ಯಾವಳಿಯ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬುಧವಾರ ಸಂಜೆ ವೇಳೆಗೆ ಈ ಕಳ್ಳತನ ನಡೆದಿದೆ. ಮ್ಯಾಕ್ಸ್ ಶಾಪಿಂಗ್ ಕಾಂಪ್ಲೆಕ್ಸ್ ಮುಂಭಾಗದಲ್ಲಿ ಹತ್ತಾರು ಬೈಕ್​ಗಳನ್ನು ನಿಲ್ಲಿಸಿದ್ದು, ಅಲ್ಲಿಗೆ ಬಂದ ಅಪರಿಚಿತ ವ್ಯಕ್ತಿಯೋರ್ವ ಮುಖಗವಸು ಧರಿಸಿ ತನ್ನಲ್ಲಿರುವ ನಕಲಿ ಕೀ ಬಳಸಿ ಬೈಕ್ ಕಳವು ಮಾಡಲು ಯತ್ನಿಸುತ್ತಾನೆ. ಆ ಬೈಕ್​​ಗೆ ನಕಲಿ ‌ಕೀ ಬಾರದ ಕಾರಣ ಮತ್ತೊಂದು ಬೈಕ್ ನತ್ತ ತೆರಳುತ್ತಾನೆ. ಅಲ್ಲಿಯೂ ವಿಫಲ ಯತ್ನ ನಡೆಸಿ ಬಳಿಕ 3ನೇಯ ಬೈಕ್ ನತ್ತ ತೆರಳಿ ತನ್ನ ನಕಲಿ ಕೀ ಬಳಸಿ ಬೈಕ್ ಕದ್ದೊಯ್ದಿರುವ ದೃಶ್ಯಾವಳಿ ಮ್ಯಾಕ್ಸ್ ಶಾಪಿಂಗ್ ಮಹಲ್​​ನಲ್ಲಿರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Related Posts

Leave a Comment