Home Kannada ಬಸ್‍ಗೆ ಡಿಕ್ಕಿ ಹೊಡೆದ ಆಟೋ- 14 ಮಂದಿ ಸಾವು

ಬಸ್‍ಗೆ ಡಿಕ್ಕಿ ಹೊಡೆದ ಆಟೋ- 14 ಮಂದಿ ಸಾವು

by Eha

ಭೋಪಾಲ್: ಆಟೋವೊಂದು ಬಸ್‍ಗೆ ಡಿಕ್ಕಿ ಹೊಡೆದ ಪರಿಣಾಮ 14 ಮಂದಿ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಮಂಗಳವಾರ ಬೆಳಗ್ಗೆ ಗ್ವಾಲಿಯರ್‍ನ ಪುರಾನಿ ಚೌವಾನಿ ಪ್ರದೇಶಲ್ಲಿ ನಡೆದಿದೆ. ಈ ಬಗ್ಗೆ ಮಾತನಾಡಿದ ಗ್ವಾಲಿಯರ್ ಎಸ್‍ಪಿ ಅಮಿತ್ ಸಿಂಗ್, ಅಪಘಾತ ಬೆಳಗ್ಗೆ ಸುಮಾರು 7 ಗಂಟೆಗೆ ಜರುಗಿದ್ದು, ಮಹಿಳೆಯರು ಅಂಗನವಾಡಿ ಕೇಂದ್ರದಲ್ಲಿ ಅಡುಗೆ ಮಾಡಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ ಎಂದು ಹೇಳಿದ್ದಾರೆ. ಈ ಕುರಿತಂತೆ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಕ್ಕೆ ತಲಾ 4 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಘಟನೆಯಲ್ಲಿ 12 ಮಂದಿ ಮಹಿಳೆಯರು ಅಂಗನವಾಡಿ ಕಾರ್ಮಿಕರಾಗಿದ್ದು, ಒಬ್ಬ ಆಟೋ ಚಾಲಕನಾಗಿದ್ದಾನೆ. ಒಂಬತ್ತು ಮಂದಿ ಮಹಿಳೆಯರು ಹಾಗೂ ಆಟೋ ಚಾಲಕ ಅಪಘಾತದಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದರೆ, ನಾಲ್ವರು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

Related Posts

Leave a Comment