Home Kannada ಬಾಲ್ಕನಿಯಲ್ಲಿ ಬೆತ್ತಲೆಯಾಗಿ ಪೋಸ್ ನೀಡಿದ ಮಹಿಳೆಯರು ಅರೆಸ್ಟ್

ಬಾಲ್ಕನಿಯಲ್ಲಿ ಬೆತ್ತಲೆಯಾಗಿ ಪೋಸ್ ನೀಡಿದ ಮಹಿಳೆಯರು ಅರೆಸ್ಟ್

by Eha

ಅಬುದಾಬಿ: ದುಬೈನ ಬಾಲ್ಕನಿಯೊಂದರ ಮೇಲೆ ಬೆತ್ತಲೆಯಾಗಿ ನಿಂತು ಪೋಸ್ ನೀಡಿದ ಮಹಿಳೆಯರ ಗುಂಪನ್ನು ಪೊಲೀಸರು ಬಂಧಿಸಿದ್ದಾರೆ. ವೈರಲ್ ಆಗಿರುವ ಫೋಟೋ ಹಾಗೂ ವೀಡಿಯೋದಲ್ಲಿ, ಶನಿವಾರ 12ಕ್ಕೂ ಹೆಚ್ಚು ಮಹಿಳೆಯರು ಮರೀನಾ ಸಮೀದಲ್ಲಿರುವ ಬಾಲ್ಕನಿಯಲ್ಲಿ ಹಾಡಹಗಲಲ್ಲೇ ಬೆತ್ತಲೆಯಾಗಿ ಸಾಲಾಗಿ ನಿಂತಿರುವುದನ್ನು ಕಾಣಬಹುದಾಗಿದೆ. ಸಾಂಪ್ರದಾಯಿಕವಾಗಿ ಮುಸ್ಲಿಂಮರೆ ಹೆಚ್ಚಾಗಿರುವ ಯುಎಇಯಲ್ಲಿನ ಈ ಘಟನೆ ಮುಸ್ಲಿಂಮರ ಸಂಪ್ರದಾಯಕ್ಕೆ ಧಕ್ಕೆಯನ್ನುಂಟು ಮಾಡಿರುವುದು, ಆಘಾತಕಾರಿ ಸಂಗಾತಿಯಾಗಿರುವುದರಿಂದ ಇದೀಗ ಅಧಿಕಾರಿಗಳನ್ನು ಕೆರಳಿಸಿದೆ. ವೀಡಿಯೋ ಪೊಲೀಸರ ಗಮನಕ್ಕೆ ಬರುತ್ತಿದ್ದಂತಯೇ ಇದೀಗ ಪೊಲೀಸರು ಮಹಿಳೆಯರನ್ನು ಬಂಧಿಸಿದ್ದಾರೆ. ಈ ಘಟನೆ ಇದೀಗ ವಿಶ್ವದ್ಯಾಂತ ಭಾರೀ ಸದ್ದು ಮಾಡುತ್ತಿದ್ದು, ಸದ್ಯ ದುಬೈ ಪೊಲೀಸರು ಬಂಧಿತ ಆರೋಪಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿದ್ದಾರೆ ಹಾಗೂ ಮುಂದಿನ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.

Related Posts

Leave a Comment