Home Kannada ಬಿಲ್ಲವರ ಅಸೋಸಿಯೇಶನ್, ಮುಂಬೈ ಡೊಂಬಿವಲಿ ಸ್ಥಳೀಯ ಕಚೇರಿ ಭ್ರಹ್ಮ ಶ್ರೀ ನಾರಾಯಣ ಗುರುವರ್ಯರ 167ನೇ ಜಯಂತಿ ಆಚರಣೆ

ಬಿಲ್ಲವರ ಅಸೋಸಿಯೇಶನ್, ಮುಂಬೈ ಡೊಂಬಿವಲಿ ಸ್ಥಳೀಯ ಕಚೇರಿ ಭ್ರಹ್ಮ ಶ್ರೀ ನಾರಾಯಣ ಗುರುವರ್ಯರ 167ನೇ ಜಯಂತಿ ಆಚರಣೆ

by akash

ಬಿಲ್ಲವರ ಎಸೋಸಿಯೇಶನ್, ಮುಂಬೈ ಇದರ ಡೊಂಬಿವಲಿ ಸ್ಥಳೀಯ ಕಚೇರಿಯ ವತಿಯಿಂದ ಭ್ರಹ್ಮ ಶ್ರೀ ನಾರಾಯಣ ಗುರುವರ್ಯರ 167ನೇ ಹುಟ್ಟುಹಬ್ಬವನ್ನು ಸೋಮವಾರ ದಿನಾಂಕ 23-08-2021 ರಂದು ಸ್ಥಳೀಯ ಕಚೇರಿಯ ಸಭಾಗ್ರಹದಲ್ಲಿ ಬಹಳ ಸಂಬ್ರಮದಿಂದ ಆಚರಿಸಲಾಯಿತು.
ಪುರೋಹಿತ ಐತಪ್ಪ ಸುವರ್ಣ , ಶ್ಶ್ರೀ ಸೀ. ಕೆ. ಪೂಜಾರಿ ಮತ್ತು ಧರ್ಮರಾಜ್ ಪೂಜಾರಿಯವರು ಗುರು ಮಂಟಪದ ಅಲಂಕಾರಗೈದು ಪೂಜಾ ವಿಧಾನಗಳನ್ನು ನೆರವೇರಿಸಿದರು. ಗುರು ಭಕ್ತರು ಬೆಳಿಗ್ಗೆ 10.00 ರಿಂದ 12.30ರ ತನಕ ತನಕ ಭಜನೆ, ಭಕ್ತಿಗೀತೆಗಳನ್ನು ಹಾಡಿ ನಂತರ ಕುಣಿತದೊಂದಿಗೆ ಭಜನಾ ಕಾರ್ಯಕ್ರಮ ವನ್ನು ನೆರವೀರಿಸಿದರು.ತದನಂತರ ಕರ್ಪೂರದಾರತಿ, ವಿಶೇಷ ಗುರೂಪೂಜೆ, ಮಹಾಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿತರಣೆ , ಅನ್ನಧಾನ ಜರುಗಿತು. ಹಿರಿಯರಾದ ಶ್ರೀ ಬಿ. ವೈ. ಸುವರ್ಣ ರವರು ಭ್ರಹ್ಮ ಶ್ರೀ ನಾರಾಯಣ ಗುರುವರ್ಯರ ಚರಿತ್ರೆಯನ್ನು ಮಹತ್ವಾ ವನ್ನು ವಿವರಿಸಿವ ಎಲ್ಲಾ ಗುರುಭಕ್ತರ ಪರವಾಗಿ ಗುರುವಂದನೆ ಸಲ್ಲಿಸಿ ಪ್ರಾರ್ಥನೆಗೈದರು. ಈ ಸಂದರ್ಬದಲ್ಲಿ ಅನ್ನಧಾನ ನೀಡಿ ಸಹಕರಿಸಿದ ಶ್ರೀ ಲಕ್ಷ್ಮಣ್ ಪೂಜಾರಿ ಯವರನ್ನು ಹಾಗು ಭಾರತ್ ಕೋ. ಆಪ್. ಬ್ಯಾಂಕ್ (ಮುಂಬೈ) ಡೊಂಬಿವಿಲಿ ಶಾಖೆಯ ಮ್ಯಾನೇಜರ್ ಶ್ರೀ ರಮೇಶ್ ಸುವರ್ಣ ಇವರನ್ನು ಸ್ಥಳೀಯ ಸಮಿತಿಯ ಕಾರ್ಯದಕ್ಷ ಶ್ರೀ ದೇವರಾಜ್ ಪೂಜಾರಿಯವರು ಶಾಲು ಹೊದಿಸಿ ಸನ್ಮಾನಿಸಿದರು. ಭಾರತ್ ಕೋ. ಆಪ್. ಬ್ಯಾಂಕ್ (ಮುಂಬೈ) ಇದರ ಅಧಿಕಾರಿಗಳು, ಪತ್ರಕರ್ತ ಶ್ರೀ ರವಿ ಅಂಚನ್, ಶ್ರೀ ವಸಂತ್ ಸುವರ್ಣ, ಡೊಂಬಿವಲಿ ಪರಿಸರದ ತುಳು ಕನ್ನಡ ಸಂಘಸಂಸ್ಥೆಗಳ ಪಧಾದಿಕಾರಿಗಳು , ಸಮಾಜ ಭಾಂಧವರು, ಹಿತೈಸಿಗಳು ಹಾಗೂ ಗುರುಭಕ್ತರು ಉಪಸ್ತಿಥರಿದ್ದು ಪ್ರಸಾದ ಸ್ವೀಕರಿಸಿದರು. ಮಾಜಿ ಕಾರ್ಯಾಧ್ಯಕ್ಷ ಶ್ರೀ ರವಿ ಯಸ್ ಸನಿಲ್ ನೆರೆದ ಸಮಸ್ತರನ್ನು ಸ್ವಾಗತಿಸಿ ವಂದಿಸಿದರು.
ಶ್ರೀಮತಿ ಮತ್ತು ಶ್ರೀ ಲಕ್ಷ್ಮಣ್ ಪೂಜಾರಿ (ಮಾಲಕರು ಪೂರ್ಣಿಮಾ ಸಭಾಗೃಹ ಹಾಗುಪ್ರೀತಿ ಕೆಟಾರಾರ್ಸ್, ಡೊಂಬಿವಲಿ, ಪಸ್ಚಿಮ) ಅನ್ನಧಾನ, ಶ್ರೀಮತಿ ಕುಶಾ ರವಿ ಸನಿಲ್ ಇವರು ಹೂ ಅಲಂಕಾರ, ಶ್ರೀಮತಿ ಗಿರಿಜಾ ಸಂಜೀವ ಪಾಲನ್ ಹಣ್ಣು ಹಂಪಲು, ಶ್ರೀಮತಿ ಮತ್ತು ಶ್ರೀ ಟಿ. ಕೆ. ಕೋಟಿಯನ್ (ಮಾಲಕರು ಶ್ರೀ ಮಂಜುನಾಥ್ ಕೇಟರರ್ಸ್) ಲಾಡು ಸೇವೆ, ಶ್ರೀಮತಿ ಮತ್ತು ಶ್ರೀ ನಿತ್ಯಾನಂದ್ ಜತ್ತನ್ (ಮಾಲಕರು ದೋಸಾ ಬೈಟ್) ಬೆಳಿಗ್ಗಿನ ಉಪಹಾರ, ಶ್ರೀಮತಿ ಮತ್ತು ಶ್ರೀ ಮಂಜಪ್ಪ ಪೂಜಾರಿಯವರು ತೆಂಗಿನಕಾಯಿ ಹಾಗು ಶ್ರೀಮತಿ & ಶ್ರೀ ರಾಜೇಶ್ ಬಂಗೇರ, ಶ್ರೀಮತಿ ಮತ್ತು ಶ್ರೀ ಸಚಿನ್ ಜಿ. ಪೂಜಾರಿ, ಶ್ರೀಮತಿ ಮತ್ತು ಶ್ರೀ ರಾಮಚಂದ್ರ ಬಂಗೇರ, ಶ್ರೀಮತಿ ಮತ್ತು ಶ್ರೀ ರಾಜು ಜಿ. ಪೂಜಾರಿ, ಹಾಗೂ ಅಪಾರ ಸಂಖ್ಯೆಯಲ್ಲಿ ಭಕ್ತರು ದೇಣಿಗೆ , ಹೂ, ಹಣ್ಣು, ದೀಪದ ಎಣ್ಣೆ ಇತ್ಯಾದಿ ನೀಡಿ ಸಹಕರಿಸಿದರು. ಗೌ. ಕಾರ್ಯಾಧ್ಯಕ್ಷ ಸೀ. ಯೆನ್. ಕರ್ಕೇರ, ಕಾರ್ಯಾಧ್ಯಕ್ಷ ದೇವರಾಜ್ ಪೂಜಾರಿ, ಮಾಜಿ ಕಾರ್ಯಾಧ್ಯಕ್ಷ ಶ್ರೀ ರವಿ ಎಸ್. ಸನಿಲ್, ಉಪ ಕಾರ್ಯಾಧ್ಯಕ್ಷರುಗಳಾದ ಚಂದ್ರಹಾಸ್ ಎಸ್. ಪಾಲನ್ ಹಾಗೂ ಶ್ರೀಧರ್ ಬಿ. ಆಮೀನ್ , ಗೌ. ಕಾರ್ಯದರ್ಶಿ ಪುರಂದರ್ ಪೂಜಾರಿಸಹಾಯಕ ಕಾರ್ಯದರ್ಶಿ ಶ್ರೀ ವಿಠ್ಠಲ್ ಪಿ. ಅಮೀನ್, ಸಹಾಯಕ ಕೋಶಾಧಿಕಾರಿ ಶ್ರೀ ರಾಜೇಶ್ ಕೋಟಿಯನ್, ಶ್ರೀ ಮಂಜಪ್ಪ ಪೂಜಾರಿ, ಶ್ರೀ ಜಗನ್ನಾಥ್ ಸನಿಲ್, ಶ್ರೀ ಶಿವಾನಂದ್ ಪೂಜಾರಿ, ಶ್ರೀ ಈಶ್ವರ್ ಕೋಟಿಯನ್, ಶ್ರೀ ಸಚಿನ್ ಜಿ. ಪೂಜಾರಿ, ಶ್ರೀ ಮೋಹನ್ ಜಿ. ಸಾಲಿಯಾನ್, ಶ್ರೀ ಪುರುಷೋತ್ತಮ್ ಪೂಜಾರಿ ಮತ್ತು ಸಮಿತಿ ಸದಸ್ಯರು, ಸದಸ್ಯರು, ಮಹಿಳಾ ವಿಭಾಗ ಮತ್ತು ಯುವ ವಿಭಾಗದ ಸದಸ್ಯರು ಕಾರ್ಯಕ್ರಮದ ಯಶಸ್ವಿಗಾಗಿ ಶ್ರಮಿಸಿದರು.

Related Posts

Leave a Comment