Home Kannada ಬಿಲ್ಲವರ ಅಸೋಸಿಯೇಶನ್ , ಮುಂಬೈಡೊಂಬಿವಲಿ ಸ್ಥಳೀಯ ಕಚೇರಿ.75ನೇ ಸ್ವಾತಂತ್ರ್ಯದಿನಾಚರಣೆ.

ಬಿಲ್ಲವರ ಅಸೋಸಿಯೇಶನ್ , ಮುಂಬೈಡೊಂಬಿವಲಿ ಸ್ಥಳೀಯ ಕಚೇರಿ.75ನೇ ಸ್ವಾತಂತ್ರ್ಯದಿನಾಚರಣೆ.

by akash

ಬಿಲ್ಲವರ ಅಸೋಸಿಯೇಶನ್, ಮುಂಬೈ ಇದರ ಡೊಂಬಿವಲಿ ಸ್ಥಳೀಯ ಕಚೇರಿಯಲ್ಲಿ ದೇಶದ 75ನೇಸ್ವಾತಂತ್ರೋತ್ಸವವನ್ನು ಆಚರಿಸಲಾಯಿತು. ಪ್ರಾರಂಬದಲ್ಲಿ ಶ್ರೀ ಧರ್ಮರಾಜ್ ಪೂಜಾರಿ ಗುರು ಪೂಜೆ ಮಾಡಿ ಪ್ರಾರ್ಥನೆ ಮಾಡಿದರು. ಸಭಾಗ್ರಹದಲ್ಲಿ ನೆರೆದಿದ್ದ ಗಣ್ಯರು, ಮಹಿಳೆಯರು , ಯುವಬ್ಯೂದಯ ಸಮಿತಿ ಸದಸ್ಯರು, ಮಕ್ಕಳು ದೇಶದ ಪ್ರಗತಿಗಾಗಿ ಗುರು ಸನ್ನಿಧಿಯಲ್ಲಿ ಪ್ರಾರ್ಥಿಸಿದರು. ಕಾರ್ಯಾಧ್ಯಕ್ಷ ಶ್ರೀ ದೇವರಾಜ್ ಪೂಜಾರಿ ದ್ವಜಾರೋಹಣ ಮಾಡಿದರು. ನೆರೆದ ಎಲ್ಲರೂ ರಾಷ್ಟ್ರಗೀತೆ ಹಾಡಿ ದ್ವಜಕ್ಕೆ ವಂದನೆ ಸಲ್ಲಿಸಿದರು. ಕಾರ್ಯಾಧ್ಯಕ್ಷ ದೇವರಾಜ್ ಪೂಜಾರಿ, ಮಾಜಿ ಕಾರ್ಯಾಧ್ಯಕ್ಷ ಶ್ರೀ ರವಿ ಸನಿಲ್ , ಉಪ ಕಾರ್ಯಾಧ್ಯಕ್ಷರುಗಳಾದ ಚಂದ್ರಹಾಸ್ ಎಸ್. ಪಾಲನ್ ಹಾಗೂ ಶ್ರೀಧರ್ ಬಿ. ಆಮೀನ್, ಗೌ. ಕಾರ್ಯದರ್ಶಿ ಪುರಂದರ್ ಪೂಜಾರಿ, ಸಹ ಕೋಶಾಧಿಕಾರಿ ರಾಜೇಶ್ ಕೋಟ್ಯಾನ್ ವೇದಿಕೆಯಲ್ಲಿ ಉಪಸ್ತಿಥರಿದ್ದರು. ಮಾಜಿ ಕಾರ್ಯಾಧ್ಯಕ್ಷ ಶ್ರೀ ರವಿ ಎಸ್ ಸನಿಲ್ ಎಲ್ಲರನ್ನು ಸ್ವಾಗತಿಸಿ ದೇಶದ ಇಂದಿನ ಪರಿಸ್ಥಿತಿಯ ಬಗ್ಗೆ ವಿವರಣೆ ನೀಡಿದರು.
ಶ್ರೀ ದೇವರಾಜ್ ಪೂಜಾರಿಯವರು ನಾವೆಲ್ಲರೂ ಶಿಸ್ತುಬದ್ದರಾಗಿ ದೇಶದ ಸೇವೆ ಮಾಡೋಣ ಎಂದು ಕರೆ ನೀಡಿದರು. ಶ್ರೀ ರವಿ ಎಸ್ ಸನಿಲ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಗೌರವ ಕಾರ್ಯದರ್ಶಿ ಪುರಂದರ್ ಪೂಜಾರಿ ಅಸೋಸಿಯೇಶನ್ನ ಮುಂದಿನ ಕಾರ್ಯಕ್ರಮಗಳ ಬಗ್ಗೆ ವಿವರಣೆ ನೀಡುತ್ತಾ ವಂದನಾರ್ಪಣೆ ಸಲ್ಲಿಸಿದ ಬಳಿಕ ಸೇರಿದ್ದ ಎಲ್ಲರಿಗೂ ಸಿಹಿ ತಿಂಡಿ ಹಾಗೂ ಲಘು ಉಪಹಾರ ನೀಡಲಾಯಿತು.

Related Posts

Leave a Comment