Home Kannada ಬಿಲ್ಲವರ ಅಸೋಸಿಯೇಷನ್, ಮುಂಬೈ
ಡೊಂಬಿವಲಿ ಸ್ಥಳೀಯ ಕಚೇರಿ

ಬಿಲ್ಲವರ ಅಸೋಸಿಯೇಷನ್, ಮುಂಬೈ
ಡೊಂಬಿವಲಿ ಸ್ಥಳೀಯ ಕಚೇರಿ

by akash

ಬಿಲ್ಲವರ ಅಸೋಸಿಯೇಷನ್, ಮುಂಬೈ ಇದರ ಡೊಂಬಿವಲಿ ಸ್ಥಳೀಯ ಕಚೇರಿಯ ವತಿಯಿಂದ ಸಮಾಜ ಬಾಂಧವರಿಗೆ ಆಹಾರ ಕಿಟ್ ವಿತರಣಾ ಕಾರ್ಯಕ್ರಮ ಬಿಲ್ಲವರ ಅಸೋಸಿಯೇಷನ್, ಮುಂಬೈ ಇದರ ಡೊಂಬಿವಲಿ ಸ್ಥಳೀಯ ಕಚೇರಿಯ ವತಿಯಿಂದ ಜೂಲೈ 11 ರಂದು ಸಮಾಜ ಬಾಂಧವರಿಗೆ ಆಹಾರ ಕಿಟ್ ವಿತರಣಾ ಕಾರ್ಯಕ್ರಮ ನೆರವೇರಿಸಲಾಯಿತು. ಬಿಲ್ಲವರ ಅಸೋಸಿಯೇಷನ್, ಮುಂಬೈ ಇದರ ಅಧ್ಯಕ್ಷ ಶ್ರೀ ಹರೀಶ್ ಜಿ. ಅಮೀನ್ ಹಾಗು ಅವರ ಕಾರ್ಯಕಾರಿ ಸಮಿತಿಯ ಹಾಗು ಸಮಾಜದ ದಾನಿಗಳ ಸಹಕಾರದಿಂದ ಅಸ್ಸೊಸಿಯೆಷನ್ ನ 22 ಸ್ಥಳೀಯ ಕಚೇರಿಗಳಲ್ಲಿ ಸಮಾಜದ ಅಸಹಾಯಕ ಕುಟುಂಬಗಳಿಗೆ ರೇಷನ್ ಕಿಟ್ ಕೊಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದು ಇದರಂತೆ ಈ ಕಾರ್ಯಕ್ರಮ ನೆಡೆಯಿತು. ಪ್ರಾರಂಭದಲ್ಲಿ ಶ್ರೀ ಧರ್ಮರಾಜ್ ಪೂಜಾರಿಯವರು ಗುರು ಪೂಜೆ ನೆರವರಿಸಿದರು ನಂತರ ನೆಡೆದ ಸಬಾ ಕಾರ್ಯಕ್ರಮದ ಸಬಾದಕ್ಷತೆಯನ್ನು ಸ್ಥಳೀಯ ಕಾರ್ಯಾಲಯದ ಕಾರ್ಯಾಧ್ಯಕ್ಷ ಶ್ರೀ ದೇವರಾಜ್ ಪೂಜಾರಿಯವರು ವಹಿಸಿದ್ದ್ದರು. ಮುಖ್ಯ ಅತಿಥಿಯಾಗಿ ಭಾರತ್ ಬ್ಯಾಂಕಿನ ಠಾಣಾ ಶಾಖೆಯ ಉಪ ಪ್ರಬಂಧಕ ಶ್ರೀ ರಘು ಪಿ. ಪೂಜಾರಿಯವರು ಆಗಮಿಸಿದ್ದರು. ವೇದಿಕೆಯಲ್ಲಿ ದಾನಿಗಳಾದ ಶ್ರೀಮತಿ ಗಿರಿಜಾ ಸಂಜೀವ ಪಾಲನ್, ಶ್ರೀ ರಾಜು ಜಿ. ಪೂಜಾರಿ, ಉಪಾಧ್ಯಕ್ಷರುಗಳಾದ ಶ್ರೀ ಚಂದ್ರಹಾಸ್ ಪಾಲನ್, ಶ್ರೀ ಶ್ರೀಧರ್ ಅಮೀನ್, ಕಾರ್ಯದರ್ಶಿ ಶ್ರೀ ಪುರಂದರ ಪೂಜಾರಿ, ಸಹಾಯಕ ಕೋಶಾಧಿಕಾರಿ ಶ್ರೀ ರಾಜೇಶ್ ಕೋಟಿಯನ್ ಹಾಗು ಮಾಜಿ ಕಾರ್ಯಾಧ್ಯಕ್ಷ ಶ್ರೀ ರವಿ ಯಸ್. ಸನಿಲ್ ಉಪಸ್ಥಿತರಿದ್ದರು. ಶ್ರೀ ರವಿ ಯಸ್. ಸನಿಲ್ ಎಲ್ಲಾರನ್ನು ಸ್ವಾಗತಿಸುತ್ತಾ ಅಸೋಸಿಯೇಷನ್ ನ ಧೇಯ ಧೋರಣೆಗಳನ್ನು ವಿವರಿಸಿ ಈಗಿನ ಅಧ್ಯಕ್ಷರಾದ ಶ್ರೀ ಹರೀಶ್ ಜಿ. ಅಮೀನ ರವರ ನೇತೃತ್ವದಲ್ಲಿ ಸಮಾಜ ಭಾಂದವರಿಗಾಗಿ ವೈದ್ಯಕೀಯ ಶಿಬಿರ, ಹಾಗು ಬಿಲ್ಲವರ ಯುವ ವಿಭಾಗ ಹಾಗು ಸಹಾಯಕ ಸಮಿತಿಯ ಸಹಕಾರಿದಿಂದ ಬಿಲ್ಲವ ಕೋವಿಡ್ ವಾರಿಯರ್ಸ್ ಗ್ರೂಪ್ ಮಾಡಿ ಕೋವಿಡ್ ಮಹಾಮಾರಿಯಿಂದ ತೊಂದರೆಗೀಡಾದ ಕುಟುಂಬಕ್ಕಾಗಿ ಸಹಾಯ ಮಾಡಿದ್ದಾರೆ. ಈಗ ಸಮಾಜದ ಅಸಹಾಯಕ ಬಂದುಗಳಿಗೆ ಸಹಾಯ ಮಾಡಲು ಮುಂದೆ ಬಂದಿದ್ದಾರೆ ಹಾಗು ಇದಕ್ಕೆ ಸಮಾಜದ ಧಾನಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು. ನಂತರ ಮುಖ್ಯ ಅತಿಥಿಗಳ ಹಾಗು ವೇದಿಕೆಯಲ್ಲಿದ್ದ ಎಲ್ಲರನ್ನು ಪರಿಚಯಸಿದರು ಹಾಗು ಸ್ಥಳೀಯ ಕಾರ್ಯಾಲಯದ ಕಾರ್ಯಾಧ್ಯಕ್ಷ ಶ್ರೀ ದೇವರಾಜ್ ಪೂಜಾರಿಯವರು ಮುಖ್ಯ ಅತಿಥಿಗಳನ್ನು ಹಾಗು ಇತರ ಧಾನಿಗಳನ್ನು ಸನ್ಮಾನಿಸಿದರು. ಮುಖ್ಯ ಅಥಿತಿ ಶ್ರೀ ರಘು ಪಿ. ಪೂಜಾರಿಯವರು ಮಾತನಾಡುತ್ತಾ ಈಗಿನ ಕೋರೋನ ಮಹಾಮಾರಿಯ ಸಮಯದಲ್ಲಿ ಬಹಳಷ್ಟ್ಟು ಮಂದಿ ತಮ್ಮ ಕೆಲಸ ಹಾಗು ಉದ್ಯೋಗ ಕಳೆದುಕೊಂಡಿದ್ದಾರೆ, ಇದರಲ್ಲಿ ಬಡ ಕುಟುಂಬವಲ್ಲದೆ ಅನುಕೂಲವಿದ್ದ ಕುಟುಂಬದವರ ಪರಿಸ್ಥಿತಿ ಸಹ ಚಿಂತಾಜನಕವಾಗಿದೆ ಇಂತಹ ಕಷ್ಟ ಸಮಯದಲ್ಲಿ ಅಸೋಸಿಯೇಷನ್ ನವರು ಮಾಡಿದ ಸಹಾಯ ಪ್ರಶಂಸನೀಯ ಎಂದರು. ಶ್ರೀ ದೇವರಾಜ್ ಪೂಜಾರಿಯವರು ತನ್ನ ಅಧ್ಯಕ್ಷೀಯ ಭಾಷಣದಲ್ಲಿ ಬಿಲ್ಲವರ ಅಸೋಸಿಯೇಷನ್ ಶ್ರೀ ಹರೀಶ್ ಜಿ. ಅಮೀನ್ ರವರ ನೇತೃತ್ವದಲ್ಲಿ ಆಹಾರದ ಕಿಟ್ ವಿತರಿಸುವುದಲ್ಲದೆ ತನ್ನ ೨೨ ಸ್ಥಳೀಯ ಸಂಸ್ಥೆಗಳಲ್ಲಿ ವೈದ್ಯಕೀಯ ಶಿಬಿರ, ಬಡ ವಿದ್ಯಾರ್ಥಿಗಳಿಗೆ ಧನ ಸಹಾಯ ಅಲ್ಲದೆ ದತ್ತು ಸ್ವೀಕಾರವನ್ನು ಮಾಡುತ್ತಾ ಬರುತ್ತಾ ಇದೆ ಎಂದರು ಹಾಗೆಯೆ ಈ ಆಹಾರದ ಕಿಟ್ಟನ್ನು ಬ್ರಹ್ಮ ಶ್ರೀ ನಾರಾಯಣ ಗುರುಗಳ ಪ್ರಸಾದವೆಂದು ಸ್ವೀಕರಿಸಬೇಕೆಂದು ತಿಳಿಸಿದರು. ನಂತರ ಆಹಾರದ ಕಿಟ್ಟನ್ನು ವೇದಿಕೆಯಲ್ಲಿದ್ದ ಗಣ್ಯರಿಂದ ಎಲ್ಲರಿಗೂ ವಿತರಿಸಲಾಯಿತು. ಕೊನೆಗೆ ಕಾರ್ಯದರ್ಶಿ ಶ್ರೀ ಪುರಂದರ ಪೂಜಾರಿಯವರು ಎಲ್ಲರಿಗೂ ಧನ್ಯವಾದ ನೀಡಿದರು. ಶ್ರೀಮತಿ ಗಿರಿಜಾ ಯಸ್. ಪಾಲನ್, ಶ್ರೀಮತಿ ಕುಶ ರವಿ ಸನಿಲ್, ಶ್ರೀ ರಮೇಶ್ ಸುವರ್ಣ, ಶ್ರೀ ದಿನೇಶ್ ಕರ್ಕೇರ, ಶ್ರೀಮತಿ ಗುಲಾಬಿ ಬಾಬು ಪೂಜಾರಿ, ಶ್ರೀ ರವಿ ಸುವರ್ಣ, ಶ್ರೀ ಕೇಶವ್ ಸುವರ್ಣ, ಶ್ರೀಮತಿ ಪ್ರೇಮಲತಾ ಸಾಲಿಯಾನ್, ಶ್ರೀ ಶರದ್ ಜೆ. ಬಂಗೇರ, ಶ್ರೀ ಕುಶರಾಜ್ ಜೆ. ಉಳ್ಳಾಲ್, ಶ್ರೀಮತಿ ರಮ್ಯಾ ಸರ್ವೇಶ್ ಪೂಜಾರಿ, ಶ್ರೀ ರಾಜೇಶ್ ಸಿ. ಕೋಟಿಯನ್, ಶ್ರೀ ರಾಮಚಂದ್ರ ಬಂಗೇರ, ಶ್ರೀ ರಾಜು ಜಿ. ಪೂಜಾರಿ, ಮತ್ತಿತರರು ಈ ಕಾರ್ಯಕ್ರಮಕ್ಕೆ ಧನ ಸಹಾಯ ನೀಡಿ ಸಹಕರಿಸಿದರು. ಕಾರ್ಯಕ್ರಮವನ್ನು ಮಾಜಿ ಕಾರ್ಯಾಧ್ಯಕ್ಷ ಶ್ರೀ ರವಿ ಯಸ್. ಸನಿಲ್ ನಿರೂಪಿಸಿದರು. ಶ್ರೀ ಸುನಿಲ್ ಸಿ. ಸಾಲ್ಯಾನ್, ಶ್ರೀ ಮಂಜಪ್ಪ ಪೂಜಾರಿ, ಶ್ರೀ ಈಶ್ವರ್ ಕೋಟಿಯನ್, ಶ್ರೀ ಆನಂದ್ ಪೂಜಾರಿ, ಶ್ರೀಮತಿ ಗುಣವತಿ ಪೂಜಾರಿ, ಶ್ರೀಮತಿ ಸುಲೋಚನಾ ಪೂಜಾರಿ, ಶ್ರೀಮತಿ ವಿನೋದ ಪೂಜಾರಿ, ಶ್ರೀಮತಿ ವಸಂತಿ ಅಮೀನ್, ಶ್ರೀ ನವೀಶ್ ಅಮೀನ್, ಶ್ರೀ ಸುಮಿತ್ ಪೂಜಾರಿ, ಶ್ರೀ ರೋಷನ್ ಪೂಜಾರಿ, ಶ್ರೀ ಗಣೇಶ್ ಪೂಜಾರಿ, ಕುಮಾರಿ ಭಾವಿಕ ಪೂಜಾರಿ, ಕುಮಾರಿ ಶ್ರುತಿ ಅಮೀನ್ ಮತ್ತಿತರರು ಈ ಕಾರ್ಯಕ್ರಮ ಯಶಸ್ವಿ ಯಾಗಲು ಸಹಕರಿಸಿದರು.

Related Posts

Leave a Comment