Home Kannada ಬಿಲ್ಲವರ ಎಸೋಸಿಯೇಶನ್ ಮೀರಾರೋಡು ಸ್ಥಳೀಯ ಕಛೇರಿಯಲ್ಲಿ ಹಳದಿಕುಂಕುಮ ಕಾರ್ಯಕ್ರಮ. ಮಹಿಳೆಯರು ಸಂಪ್ರದಾಯವನ್ನು ಮರೆಯಬಾರದು…ಸುಜಾತಾ ಕೋಟ್ಯಾನ್.

ಬಿಲ್ಲವರ ಎಸೋಸಿಯೇಶನ್ ಮೀರಾರೋಡು ಸ್ಥಳೀಯ ಕಛೇರಿಯಲ್ಲಿ ಹಳದಿಕುಂಕುಮ ಕಾರ್ಯಕ್ರಮ. ಮಹಿಳೆಯರು ಸಂಪ್ರದಾಯವನ್ನು ಮರೆಯಬಾರದು…ಸುಜಾತಾ ಕೋಟ್ಯಾನ್.

by Eha

ಚಿತ್ರ ವರದಿ: ಉಮೇಶ್. ಕೆ.ಅಂಚನ್.

ಹಳದಿಕುಂಕುಮ ಕಾರ್ಯಕ್ರಮವು ಮರಾಠಿ ಮಣ್ಣಿನ ಸಂಪ್ರದಾಯವಾದರೂ ನಾವು ಕೂಡಾ ಅದನ್ನು ಅಚ್ಚುಕಟ್ಟಾಗಿ ಪ್ರತೀ ವರ್ಷ ಆಚರಿಸುತ್ತಿದ್ದೇವೆ. ಕುಂಕುಮವು ಮಹಿಳೆಯರ ಸೌಭಾಗ್ಯದ ಕುರುಹಾಗಿದ್ದು ಹಳದಿಯು ರೋಗನಿರೋಧಕ ಶಕ್ತಿಯನ್ನು ಪಡೆದಿದೆ. ಮಹಿಳೆಯರು ನಮ್ಮ ಹಿರಿಯರ ಸಂಪ್ರದಾಯಗಳನ್ನು ಮರೆಯದೆ ಅದನ್ನು ಪಾಲಿಸಿ ತಮ್ಮ ಮಕ್ಕಳಿಗೂ ಅದರ ಮಹತ್ವಗಳನ್ನು ತಿಳಿಸಬೇಕು ಎಂದು ಭಾರತ್ ಬ್ಯಾಂಕ್ ಮೀರಾರೋಡು ಶಾಖೆಯ ಉಪ ಪ್ರಭಂದಕಿ ಸುಜಾತಾ ಎಲ್ ಕೋಟ್ಯಾನ್ ಹೇಳಿದರು. ಅವರು ಮೀರಾರೋಡು ಬಿಲ್ಲವರ ಎಸೋಸಿಯೇಶನಿನ ಸ್ಥಳೀಯ ಕಛೇರಿಯ ಮಹಿಳಾ ವಿಭಾಗದ ಸದಸ್ಯರು ಆಯೋಜಿಸಿದ್ದ ಹಳದಿಕುಂಕುಮ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದರು. ಅತಿಥಿಗಳನ್ನು ಸುಲೋಚನಾ ಮಾಬಿಯಾನ್ ಪರಿಚಯಿಸಿದರು . ಸಂಜೀವಿ.ಎಸ್. ಪೂಜಾರಿ ಹಳದಿ ಕುಂಕುಮದ ಮಹತ್ವದ ಬಗ್ಗೆ ವಿವರಿಸಿದರು. ಸ್ಥಳೀಯ ಕಛೇರಿಯ ಗೌರವ ಕಾರ್ಯಾದ್ಯಕ್ಷ ಹಾಗೂ ಕಾರ್ಯಕ್ರಮದ ಅದ್ಯಕ್ಷ ಭೋಜ.ಬಿ.ಸಾಲ್ಯಾನ್ ರವರು ಮಾತನಾಡಿ ಕೊರೊನಾ ಮಹಾಮಾರಿಯ ಈ ಸಂಧರ್ಭದಲ್ಲೂ ಸರಕಾರದ ನಿಯಮಗಳನ್ನು ಅಚ್ಚುಕಟ್ಟಾಗಿ ಪಾಲಿಸಿ ಹಳದಿ ಕುಂಕುಮ ಕಾರ್ಯಕ್ರಮವನ್ನು ಆಯೋಜಿಸಿದ್ದ ಮಹಿಳಾ ವಿಭಾಗದ ಸದಸ್ಯೆಯರಿಗೂ, ಸಹಕಾರ ನೀಡಿ ಪ್ರೋತ್ಸಾಹಿಸಿದ ಸದಸ್ಯರಿಗೂ ಅಭಾರ ಮನ್ನಿಸಿದರು. ವೇದಿಕೆಯಲ್ಲಿ ಕೇಂದ್ರ ಕಛೇರಿಯ ಮಹಿಳಾ ವಿಭಾಗದ ಸದಸ್ಯೆ ಲಕ್ಷ್ಮೀ ಪೂಜಾರಿ ಉಪಸ್ಥಿತರಿದ್ದರು. ಸ್ಥಳೀಯ ಕಛೇರಿಯ ಗೌರವ ಕಾರ್ಯದರ್ಶಿ ಎನ್.ಪಿ.ಕೋಟ್ಯಾನ್ ಸ್ವಾಗತಿಸಿ ಶೋಭಾ.ಎಚ್.ಪೂಜಾರಿ ವಂದಿಸಿದರು. ಸುಂದರಿ.ಆರ್. ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು. ಸದಸ್ಯರಿಂದ ಭಜನೆ ಹಾಗೂ ಅರ್ಚಕ ಶ್ಯಾಮ್ ಅಮೀನ್ ರವರಿಂದ ಗುರುಪೂಜೆ, ಮಹಾಆರತಿ ಹಾಗೂ ತದನಂತರ ಪ್ರಸಾದ ವಿತರಣೆ ನಡೆಯಿತು. ಪರಿಸರದ ಸಂಘಸಂಸ್ಥೆಗಳ ಮಹಿಳಾ ಸದಸ್ಯೆಯರು ಭಾಗವಹಿಸಿದ್ದರು.ಸ್ಥಳೀಯ ಕಛೇರಿಯ ಕೋಶಾಧಿಕಾರಿ ಎಚ್.ಎಸ್. ಪೂಜಾರಿ, ಲೀಲಾಧರ್ ಸನಿಲ್, ದಿನೇಶ್ ಸುವರ್ಣ, ಆಶೋಕ್ ಸಾಲ್ಯಾನ್, ವಿಶ್ವನಾಥ್ ಅಮೀನ್, ಗೀತಾ.ಎಮ್.ಪೂಜಾರಿ, ಭಾರತಿ ಅಂಚನ್, ಶಾಂಭವಿ.ಜಿ.ಸಾಲ್ಯಾನ್, ಇಂದಿರಾ ಸುವರ್ಣ, ರಾಧಾ ಕೋಟ್ಯಾನ್, ಲಕ್ಷ್ಮೀ ಅಮೀನ್ ಮೊದಲಾದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ್ದರು.

Related Posts

Leave a Comment