Home Kannada ಬಿಲ್ಲವರ ಎಸೋಸಿಯೇಶನ್ ಮುಂಬಯಿ, ಜೋಗೇಶ್ವರಿ ಸ್ಥಳೀಯ ವತಿಯಿಂದ ಬೃಹ್ಮಶ್ರೀ ನಾರಾಯಣ ಗುರುಗಳ 167ನೇ ಜಯಂತಿ ಮಹೋತ್ಸವವು ಆಚರಣೆ

ಬಿಲ್ಲವರ ಎಸೋಸಿಯೇಶನ್ ಮುಂಬಯಿ, ಜೋಗೇಶ್ವರಿ ಸ್ಥಳೀಯ ವತಿಯಿಂದ ಬೃಹ್ಮಶ್ರೀ ನಾರಾಯಣ ಗುರುಗಳ 167ನೇ ಜಯಂತಿ ಮಹೋತ್ಸವವು ಆಚರಣೆ

by akash

ಮುಂಬೈ : ಬಿಲ್ಲವರ ಎಸೋಸಿಯೇಶನ್ ಮುಂಬಯಿ, ಇದರ ಜೋಗೇಶ್ವರಿ ಸ್ಥಳೀಯ ವತಿಯಿಂದ ಆ 29ರವಿವಾರದಂದು ಬೃಹ್ಮಶ್ರೀ ನಾರಾಯಣ ಗುರುಗಳ 167ನೇ ಜಯಂತಿ ಮಹೋತ್ಸವವು ಅತೀ ವಿಜೃಂಭಣೆಯಿಂದ ನೆರವೇರಿತು. ಜೋಗೇಶ್ವರಿ ಪೂರ್ವದ ಗುಫಾ ಮಾರ್ಗ (ಸ್ಟೇಶನ್ ರೋಡ್)ದಲ್ಲಿರುವ ಪ್ರೇಮ್ಸನ್ ಕೈಗಾರಿಕಾ ಘಟಕದ ತಳಮಹಡಿಯಲ್ಲಿರುವ ಜೋಗೇಶ್ವರಿ ಸ್ಥಾನೀಯ ಕಾರ್ಯಾಲಯದಲ್ಲಿ, ಸ್ಥಳೀಯ ಕಚೇರಿಯಗೌರವಾಧ್ಯಕ್ಷ ಹೆರ್ಗ ಬಾಬು ಪೂಜಾರಿ, ಕಾರ್ಯಾಧ್ಯಕ್ಷ ನಾರಾಯಣ ಪೂಜಾರಿ, ಗೌ॥ ಕಾರ್ಯದರ್ಶಿ ಚಂದ್ರೇಶ್ ಸುವರ್ಣ, ಕೋಶಾಧಿಕಾರಿ ಪ್ರಶಾಂತ್ ಸುವರ್ಣ ಅವರುಗಳ ಮುಂದಾಳುತ್ವದಲ್ಲಿ ಹಾಗೂ ಸರ್ವ ಸದಸ್ಯರು, ಮಹಿಳಾ ಸದಸ್ಯೆಯರು, ಯುವ ವಿಭಾಗದ ಸದಸ್ಯರು ಉಪಸ್ಥಿತಿಯಲ್ಲಿ ಗುರುಗಳ ಜಯಂತಿ ಮಹೋತ್ಸವಕ್ಕೆ ನಡೆಯಿತು. ಸಂಜೆ ಭಜನಾ ಕಾರ್ಯಕ್ರಮದೊಂದಿಗೆ ಪ್ರಾರಂಭಗೊಂಡು, ತದನಂತರ 108 ಬಾರಿ ” ಓಂ ನಮೋ ನಾರಾಯಣ ನಮಃ ಶಿವಾಯ” ಜಪದೊಂದಿಗೆ ಮಹಾಪೂಜೆ, ಮಂಗಳಾರತಿ, ತೀರ್ಥಪ್ರಸಾದ ವಿತರಣೆಯೊಂದಿಗೆ ಸಂಪನ್ಮಗೊಂಡಿತು.          ಪೂಜಾ ಕಾರ್ಯಗಳು ನಾರಾಯಣ ಪೂಜಾರಿ ದಂಪತಿಗಳು ಯಜಮಾನಿಕೆಯಲ್ಲಿ , ಪೌರೋಹಿತ್ಯವನ್ನು  ಶೇಖರ ಶಾಂತಿಯವರು ನಡೆಸಿದರು. ಹೆರ್ಗ ಬಾಬು ಪೂಜಾರಿಯವರ ವತಿಯಿಂದ ಅನ್ನಪ್ರಸಾದ ನಡೆಯಿತು. ಪಡುಬಿದ್ರಿ ಸುರೇಶ್ ಕೋಟ್ಯಾನ್ ಇವರು ಕಾರ್ಯಾಲಯವನ್ನು  ಹೂವಿನಿಂದ  ಶೃಂಗಾ ರಿಸಿದರು ಅಂದಿನ ಧಾರ್ಮಿಕ ಕಾರ್ಯಕ್ರಮಕ್ಕೆ ಭಾರತ್ ಬ್ಯಾಂಕ್ ನಿರ್ದೇಶಕ ಹಾಗೂ ಕೈಗಾರಿಕೋದ್ಯಮಿ ಸೂರ್ಯ  ಜೆ. ಸುವರ್ಣ,  ಅಸೋಸಿಯೇಷನ್ ಉಪಾಧ್ಯಕ್ಷ ಶಂಕರ ಡಿ. ಪೂಜಾರಿ, ಗೌ॥ ಪ್ರ॥ ಕಾರ್ಯದರ್ಶಿ ಧನಂಜಯ ಶಾಂತಿ, ಜೊತೆ ಕಾರ್ಯದರ್ಶಿ ಹರೀಶ್ ಸಾಲ್ಯಾನ್,  ಯುವ ಅಭ್ಯುದಯ ಸಮಿತಿಯ ಕಾರ್ಯಧ್ಯಕ್ಷ ನಾಗೇಶ್ ಕೋಟ್ಯಾನ್, ಧಾರ್ಮಿಕ ಸಮಿತಿಯ ಕಾರ್ಯಾಧ್ಯಕ್ಷ ಮೋಹನ ಪೂಜಾರಿ,  ಭಾರತ್ ಬ್ಯಾಂಕ್ ಜೋಗೇಶ್ವರಿ ಪ್ರಬಂಧಕ್ಕೆ ಶಿಲ್ಪಾ ಪೂಜಾರಿ, ಕೈಗಾರಿಕೋದ್ಯಮಿಗಳಾದ ಜಯಂತ್ ಉಚ್ಚಿಲ, ಕ್ಲೌಡಿ ಡಿ’ಸೋಜ, ಬಾಲು ಜ್ಯೋತಿಬ ರೆಡೆಕರ್,  ಜಗದಂಬಾ ಕಾಳಭೈರವ ಮಂದಿರದ ಟ್ರಸ್ಟಿಗಳಾದ ಸಂಜೀವ ಪೂಜಾರಿ, ಡಿ.ಟಿ.ಕುಂದರ್ ಹಾಗೂ ಭಜನಾ ಮಂಡಳಿಯ ಸದಸ್ಯರು, ಮಹಾಕಾಳಿ ಮಂದಿರದ ಭಜನಾ ಭುವಾಜಿ ಶಂಕರ ಪೂಜಾರಿ ಹಾಗೂ ಸದಸ್ಯರು, ಮ್ಯೂಸಿಕ್ ಡೈರೆಕ್ಟರ್ ಶ್ರೀಕಾಂತ್ ಶೆಟ್ಟಿ, ಪಡುಬಿದ್ರಿ ಸುರೇಶ್ ಕೋಟ್ಯಾನ್, ಚಾರ್ಟರ್ಡ್ ಎಕೌಂಟೆಂಟ್ ಆಶೀಷ್ ಸುವರ್ಣ ಹಾಗೂ ಅಪಾರ ಗುರು ಭಕ್ತರು ಪಾಲ್ಗೊಂಡಿದ್ದರು, ಕಾರ್ಯಕ್ರಮ ಯಶಸ್ಸಿಗೆ  ಸಹಕರಿಸಿದ ಎಲ್ಲರಿಗೂ ಕಾರ್ಯದರ್ಶಿ ಚಂದ್ರೇಶ್ ಸುವರ್ಣ ಧನ್ಯವಾದ ಅರ್ಪಿಸಿರುವರು.

Related Posts

Leave a Comment