Home Kannada ಬಿಲ್ಲವ ಸೇವಾ ಸಂಘ ಕುಂದಾಪುರ ಮುಂಬಯಿ ಏಕತೆಯಿಂದ ಮುನ್ನೆಡೆದು ಸಂಘಟನೆಯ ಬಲವರ್ಧನೆಗಾಗಿ ಶ್ರಮಿಸೋಣ : ಸೂರ್ಯ ಎಸ್. ಪೂಜಾರಿ

ಬಿಲ್ಲವ ಸೇವಾ ಸಂಘ ಕುಂದಾಪುರ ಮುಂಬಯಿ ಏಕತೆಯಿಂದ ಮುನ್ನೆಡೆದು ಸಂಘಟನೆಯ ಬಲವರ್ಧನೆಗಾಗಿ ಶ್ರಮಿಸೋಣ : ಸೂರ್ಯ ಎಸ್. ಪೂಜಾರಿ

by akash

ಮುಂಬಯಿ ನ. 26: ಒಂದು ಸಂಘ ಯಶಸ್ವಿಯಾಗಿ ಮುನ್ನೆಡೆಯಲು ಸದಸ್ಯರ ಸಹಕಾರ ಅತೀ ಅಗತ್ಯವಾಗಿದೆ ನಮ್ಮ ಆಡಳಿತ ಮಂಡಳಿ ಹಾಗೂ ಉಪಸಮಿತಿಗಳೊಂದಿಗೆ ಸಮುದಾಯದ ಕೊಡುಗೈದಾನಿಗಳ ಸಹಕಾರದಿಂದ ಲಾಕ್ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೀಡಾದ ಸದಸ್ಯರಿಗೆ ನೆರವು ನೀಡಲು ಸಾಧ್ಯವಾಯಿತು. ಕೊರೊನಾ ನಿಮಿತ್ತ ಸರಕಾರದ ಕೆಲವು ನಿರ್ಬಂಧ ಜಾರಿಯಲ್ಲಿರುವುದರಿಂದ ಸಂಘದ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿವೇತನ ವಿತರಣೆ ಸಮಾರಂಭ ಮುಂದೂಡಿದ್ದೇವೆ ಆ ನಿಟ್ಟಿನಲ್ಲಿ ನೂತನ ಆಡಳಿತ ಮಂಡಳಿಯು ಈ ಕುರಿತು ನಿರ್ಧರಿಸಿ ಸಧ್ಯದಲ್ಲಿಯೇ ಕಾರ್ಯಕ್ರಮ ಆಯೋಜಿಸಲಿದೆ ಎಂದು ಬಿಲ್ಲವ ಸೇವಾ ಸಂಘ ಕುಂದಾಪುರ (ರಿ) ಮುಂಬಯಿ ಇದರ ಅಧ್ಯಕ್ಷರಾದ ಸೂರ್ಯ ಎಸ್. ಪೂಜಾರಿ ನುಡಿದರು
ಅವರು ನವೆಂಬರ್ 21 ರಂದು ಥಾಣೆ ಪಶ್ಚಿಮದಲ್ಲಿರುವ ರೋಟರಿ ಕ್ಲಬ್ ಸಭಾಗೃಹದಲ್ಲಿ ಆಯೋಜಿಸಿದ ಸಂಘದ 32 ಮತ್ತು 33 ನೆಯ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರತಿಯೊಬ್ಬರು ಸಮಾಜಕ್ಕಾಗಿ ದುಡಿದಾಗ ಸಮುದಾಯದ ಅಭಿವೃದ್ಧಿ ಆಗುತ್ತದೆ ಕೇವಲ ಮಾತನಾಡುವುದರಿಂದ ಅಭಿವೃದ್ಧಿಯಾಗುವುದಿಲ್ಲ. ಸಂಘದ ಕೆಲಸಕ್ಕಾಗಿ ಸಮಯ ನೀಡಲು ಸಾಧ್ಯವಿರುವ ಸದಸ್ಯರು ಮುಂದೆ ಬಂದು ಸಂಘಟನೆ ಬಲಪಡಿಸಲು ಸಹಕರಿಸಬೇಕು ಪದಾಧಿಕಾರಿಗಳಾದವರು ಕೇವಲ ಹೆಸರಿಗೆ ಮಾತ್ರ ಪದಾಧಿಕಾರಿ ಆಗಿರದೆ ಅಥವಾ ಇಂತಹ ಸಂಘದಲ್ಲಿ ನಾನು ಪದಾಧಿಕಾರಿ ಎಂದು ಹೇಳಿಕೊಳ್ಳಲು ಸೀಮಿತವಾಗಿರದೆ ವಹಿಸಿಕೊಂಡ ಜವಬ್ದಾರಿ ನಿರ್ವಹಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದಾಗ ಅದರಲ್ಲಿ ಯಶಸ್ಸು ಪಡೆಯಬಹುದು ಮತ್ತು ಸಾರ್ಥಕತೆಯನ್ನು ಕಾಣಬಹುದು. ಸಮುದಾಯದ ಶ್ರೇಯೋಭಿವೃದ್ಧಿಯೇ ನಮ್ಮ ಗುರಿ ಆಗಿರುವುದರಿಂದ ಇನ್ನಾದರು ಎಲ್ಲರೂ ಏಕತೆಯಿಂದ ಮುನ್ನೆಡೆದು ಸಂಘಟನೆಯ ಬಲವರ್ಧನೆಗಾಗಿ ಶ್ರಮಿಸೋಣ ಎಂದರು.
ಯುವ ಅಭ್ಯುದಯ ಸಮಿತಿಯ ಜಯಶ್ರೀ ಎ. ಕೋಡಿ, ದೀಪಾ ವೈ. ಪೂಜಾರಿ, ರಾಜಶ್ರೀ ಪಿ. ಸಾಲಿಯಾನ್ ಅವರ ಪ್ರಾರ್ಥನೆಯೊಂದಿಗೆ ಮಹಾಸಭೆಯು ಪ್ರಾರಂಭವಾಯಿತು ಗೌರವ ಪ್ರಧಾನ ಕಾರ್ಯದರ್ಶಿ ಅಶೋಕ ಎನ್. ಪೂಜಾರಿ ಸಭಾಧ್ಯಕ್ಷರನ್ನು ಹಾಗೂ ನೆರೆದ ಸದಸ್ಯರನ್ನು ಸ್ವಾಗತಿಸಿ ಕಾರ್ಯ ಕಲಾಪವನ್ನು ಆರಂಭಿಸಿ ಗತ ಮಹಾಸಭೆಯ ವರದಿ ಮತ್ತು ಪ್ರಸಕ್ತ ಸಾಲಿನ ವರದಿಯನ್ನು ಮಂಡಿಸಿದರು. ಲೆಕ್ಕ ಪರಿಶೋಧಕರಿಂದ ಪರಿಶೀಲಿಸಲ್ಪಟ್ಟ ಆಯ-ವ್ಯಯದ ವಿವರಗಳನ್ನು ಮಹಾಸಭೆಯ ಮಂಜೂರಾತಿಗಾಗಿ ಗೌರವ ಕೋಶಾಧಿಕಾರಿ ಶ್ರೀಧರ ವಿ. ಪೂಜಾರಿ ಮಂಡಿಸಿದರು ಅವುಗಳು ಸಭೆಯ ಸರ್ವಾನುಮತದೊಂದಿಗೆ ಅಂಗೀಕರಿಸಲ್ಪಟ್ಟಿತು ಸದಸ್ಯರಾದ ಮಂಜುನಾಥ ಬಿಲ್ಲವ ಶಿರೂರು, ಸಿ. ಎ. ಪೂಜಾರಿ, ಶಂಕರ ಎಮ್. ಪೂಜಾರಿ, ಲಕ್ಷ್ಮಣ ಪೂಜಾರಿ ಕೊಡೇರಿ, ಕೆ. ಆರ್. ಪೂಜಾರಿ ಮಾತನಾಡಿ ಸಂಘಟನಾಭಿವೃಧ್ಧಿಗೆ ಅನೇಕ ಸಲಹೆ ಸೂಚನೆಗಳನ್ನು ನೀಡಿ ಸಂಘದ ಕಾರ್ಯ ವೈಖರಿಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು ಸಾಕಷ್ಟು ನಾಮಪತ್ರ ಸಲ್ಲಿಕೆ ಆಗದೆ ಇರುವುದರಿಂದ ಮುಂಬರುವ ಆಡಳಿತ ಸಮಿತಿಗೆ ನೂತನ ಸದಸ್ಯರ ಆಯ್ಕೆಯನ್ನು ಮಹಾಸಭೆಯೇ ಮಾಡಬೇಕು ಎಂದು ಚುನವಣಾಧಿಕಾರಿಯಾದ ರಾಘವೇಂದ್ರ ಬಿಲ್ಲವ ತಿಳಿಸಿದರು ಅದಕ್ಕೆ ಮಹಾಸಭೆಯು 34 ನೇ ವರ್ಷದ ಕಾಲಾವಧಿಗೆ ಹಿಂದಿನ ಸಮಿತಿಯನ್ನು ಮುಂದುವರೆಸುವಂತೆ ನಿರ್ಧರಿಸಿತು ಸಂಘದ ಅಧ್ಯಕ್ಷರಾದ ಸೂರ್ಯ ಎಸ್. ಪೂಜಾರಿ, ಗೌರವ ಪ್ರಧಾನ ಕಾರ್ಯದರ್ಶಿ ಅಶೋಕ ಎನ್. ಪೂಜಾರಿ, ಗೌರವ ಕೋಶಾಧಿಕಾರಿ ಶ್ರೀಧರ ವಿ. ಪೂಜಾರಿ ಮತ್ತು ಮಹಿಳಾ ಸಮಿತಿಯ ಕಾರ್ಯಾಧ್ಯಕ್ಷೆ ಬೇಬಿ ಆರ್. ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರೆ, ಉಪಾಧ್ಯಕ್ಷರುಗಳಾದ ನರಸಿಂಹ ಎಮ್. ಬಿಲ್ಲವ, ಎಸ್. ಕೆ. ಪೂಜಾರಿ, ಜೊತೆ ಕಾರ್ಯದರ್ಶಿಗಳಾದ ಸುಶೀಲ ಆರ್. ಪೂಜಾರಿ, ರಂಗ ಎಸ್. ಪೂಜಾರಿ, ಜೊತೆ ಕೋಶಾಧಿಕಾರಿಗಳಾದ ರಮೇಶ ಜಿ. ಬಿಲ್ಲವ, ಆನಂದ ಕೆ. ಪೂಜಾರಿ ಮಾಜಿ ಅಧ್ಯಕ್ಷರುಗಳಾದ ಆನಂದ ಎಮ್. ಪೂಜಾರಿ, ಮಂಜುನಾಥ ಬಿಲ್ಲವ ಶಿರೂರು, ಯುವ ಆಭ್ಯುದಯ ಸಮಿತಿಯ ಕಾರ್ಯಾಧ್ಯಕ್ಷೆ ಜಯಶ್ರೀ ಎ. ಕೋಡಿ, ಧಾರ್ಮಿಕ ಮತ್ತು ಸಾಮಾಜಿಕ ಸಮಿತಿಯ ಕಾರ್ಯಾಧ್ಯಕ್ಷ ನಾಗರಾಜ ಎಂ. ಪೂಜಾರಿ ಹಾಗೂ ಆಡಳಿತ ಸಮಿತಿ ಮತ್ತು ಉಪಸಮಿತಿಯ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು
ಚುನವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ರಾಘವೇಂದ್ರ ಬಿಲ್ಲವರಿಗೆ ಸಂಘದ ಪರವಾಗಿ ಅಧ್ಯಕ್ಷರು ಗೌರವ ಪುಷ್ಪ ನೀಡಿದರು, ಗೌರವ ಪ್ರಧಾನ ಕಾರ್ಯದರ್ಶಿ ಅಶೋಕ ಎನ್. ಪೂಜಾರಿ ಕಾರ್ಯ ಕಲಾಪದ ನಿರ್ವಹಣೆಗೈದರೆ ಜೊತೆ ಕಾರ್ಯದರ್ಶಿ ಸುಶೀಲ ಆರ್. ಪೂಜಾರಿ ವಂದಿಸಿದರು. ಶಿವಸಾಗರ್ ಹೋಟೆಲ್ ಥಾಣೆ ಇವರು ಸಂಜೆಯ ಉಪಾಹಾರವನ್ನು ಕೊಡುಗೆಯಾಗಿ ನೀಡಿದ್ದರು.

Related Posts

Leave a Comment

Translate »