Home Kannada ಬಿಸಿಲಿನ ತಾಪಕ್ಕೆ ಕೆರೆಯಲ್ಲಿದ್ದ ಮೊಸಳೆಗಳು ಸಾವು

ಬಿಸಿಲಿನ ತಾಪಕ್ಕೆ ಕೆರೆಯಲ್ಲಿದ್ದ ಮೊಸಳೆಗಳು ಸಾವು

by Eha

ರಾಯಚೂರು: ಬಿಸಿಲಿನ ತಾಪಕ್ಕೆ ಕೆರೆಯಲ್ಲಿನ ಮೊಸಳೆ ಮರಿಗಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಲಿಂಗಸುಗೂರಿನ ಆಶಿಹಾಳ ತಾಂಡದಲ್ಲಿ ನಡೆದಿದೆ. ಕೆರೆದಡದಲ್ಲಿ ಎರಡು ಮೊಸಳೆ ಮರಿಗಳು ಸತ್ತು ಬಿದ್ದಿರುವುದನ್ನ ಕಂಡು ಗ್ರಾಮಸ್ಥರು ಇನ್ನಷ್ಟು ಮೊಸಳೆಗಳು ಇರಬಹುದು ಅಂತ ಗಾಬರಿಯಾಗಿದ್ದಾರೆ. ಮಳೆಗಾಲದಲ್ಲಿ ಹರಿಯುವ ನೀರಿನೊಂದಿಗೆ ಬಂದು ಸೇರಿಕೊಂಡ ಮರಿಗಳು ಕೊನೆಗೆ ಕೆರೆಯಲ್ಲೇ ಉಳಿದುಕೊಂಡಿವೆ. ಈಗ ಪತ್ತೆಯಾಗಿರುವ ಮರಿಗಳು ಎರಡು ಅಥವಾ ಮೂರು ತಿಂಗಳ ವಯಸ್ಸಿನವು ಇರಬಹುದು ಎನ್ನಲಾಗಿದೆ. ಕೆರೆಯಲ್ಲಿ ತಾಯಿ ಮೊಸಳೆ ಸೇರಿ ಇನ್ನಷ್ಟು ಮೊಸಳೆಗಳು ಇರುವ ಸಾಧ್ಯತೆಯಿದೆ. ಕೆರೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದು, ಬಿಸಿಲಿನ ತಾಪಕ್ಕೆ ಸತ್ತಿರಬಹುದು ಎನ್ನಲಾಗಿದೆಯಾದ್ರೂ ಮೊಸಳೆಗಳ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಕೆರೆಯಲ್ಲಿ ಮೀನು ಹಿಡಿಯಲು ಹೋದ ಮೀನುಗಾರರು ಕೊಲೆ ಮಾಡಿರುವ ಶಂಕೆಯೂ ಇದೆ. ಮೀನುಗಾರರ ಗಾಳಕ್ಕೆ ಸಿಲುಕಿದಾಗ ಸಾಯಿಸಿರುವ ಅನುಮಾನಗಳನ್ನು ಸಹ ಅರಣ್ಯ ಇಲಾಖೆ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಸದ್ಯ ಪರಸ್ಥಿತಿ ನೋಡಿದರೆ ಈ ಕೆರೆಯಲ್ಲಿ ಇನ್ನೂ ಮೊಸಳೆಗಳು ವಾಸವಾಗಿರುವುದು ಅನುಮಾನ. ಹೀಗಾಗಿ ಗ್ರಾಮಸ್ಥರು ಭಯಪಡುವ ಅಗತ್ಯವಿಲ್ಲ ಅಂತ ಅಧಿಕಾರಿಗಳು ತಿಳಿಸಿದ್ದಾರೆ.

Related Posts

Leave a Comment