Home Kannada ಬೆಳಗಾವಿ; ಗಣೇಶ ವಿಸರ್ಜನೆ ಹೊಂಡದಲ್ಲಿ ಈಜಲು ಹೋದ ಬಾಲಕ ಸಾವು

ಬೆಳಗಾವಿ; ಗಣೇಶ ವಿಸರ್ಜನೆ ಹೊಂಡದಲ್ಲಿ ಈಜಲು ಹೋದ ಬಾಲಕ ಸಾವು

by Eha

ಬೆಳಗಾವಿ: ನಗರದ ವಡಗಾವಿಯ ಕಲ್ಲಪ್ಪನ ಕೆರೆಯ ಪಕ್ಕದ ಗಣೇಶ ವಿಸರ್ಜನೆ ಹೊಂಡಕ್ಕೆ ಬಿದ್ದು ಬಾಲಕನೋರ್ವ ಸಾವನ್ನಪ್ಪಿದ್ದಾನೆ. ವಡಗಾವಿಯ ವಿನಾಯಕ ಜ್ಯೋತಿಬಾ ಹರ್ನಿ (14) ಮೃತ ಬಾಲಕ. ಈತ ಶುಕ್ರವಾರ ಬೆಳಗ್ಗೆ ಮನೆಯಲ್ಲಿ ಶಾಲೆಗೆ ಹೋಗುವುದಾಗಿ ಹೇಳಿ ಸೈಕಲ್ ತೆಗೆದುಕೊಂಡು ಕಲ್ಲಪ್ಪನ ಕೆರೆಯ ಪಕ್ಕದ ಗಣೇಶ ವಿಸರ್ಜನೆ ಹೊಂಡಕ್ಕೆ ಈಜಲು ತೆರಳಿದ್ದ. ಆದರೆ ದುರದೃಷ್ಟವಶಾತ್ ನೀರಿನಲ್ಲಿ ಮುಳುಗಿ ಕೊನೆಯುಸಿರೆಳೆದಿದ್ದಾನೆ. ವಿಷಯ ತಿಳಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಶಹಾಪೂರ ಠಾಣೆ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಬಾಲಕನ ಶವ ಹೊರ ತೆಗೆದಿದ್ದಾರೆ. ಶಹಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Posts

Leave a Comment