Home Kannada ಬೆಳ್ತಂಗಡಿಯಲ್ಲಿ ಟೆಂಪೋ ಅಪಘಾತ: ಶಿವರಾತ್ರಿ ಪಾದಯಾತ್ರಿಗಳು ಸೇರಿ 12 ಮಂದಿಗೆ ಗಾಯ

ಬೆಳ್ತಂಗಡಿಯಲ್ಲಿ ಟೆಂಪೋ ಅಪಘಾತ: ಶಿವರಾತ್ರಿ ಪಾದಯಾತ್ರಿಗಳು ಸೇರಿ 12 ಮಂದಿಗೆ ಗಾಯ

by Eha

ಬೆಳ್ತಂಗಡಿ: ಟೆಂಪೋ ಚಾಲಕನ ನಿಯಂತ್ರಣ ತಪ್ಪಿ ಶಿವರಾತ್ರಿ ಹಬ್ಬಕ್ಕೆಂದು ನಡೆದುಕೊಂಡು ಹೋಗುತ್ತಿದ್ದ ಪಾದಯಾತ್ರಿಗಳಿಗೆ ಡಿಕ್ಕಿ ಹೊಡೆದು ಕಂದಕಕ್ಕೆ ನುಗ್ಗಿರುವ ಘಟನೆ ಮಂಗಳೂರು-ಚಿಕ್ಮಮಗಳೂರು ರಾಷ್ಟ್ರೀಯ ಹೆದ್ದಾರಿಯ ಚಾರ್ಮಾಡಿ ಘಾಟಿಯ ಮೊದಲ ಹಿಮ್ಮುರಿ ತಿರುವಿನ ಸಮೀಪ ನಡೆದಿದೆ. ಅಪಘಾತದಲ್ಲಿ ಇಬ್ಬರು ಶಿವರಾತ್ರಿ ಪಾದಯಾತ್ರಿಗಳು ಹಾಗೂ ಟಿ.ಟಿ.ಯಲ್ಲಿದ್ದ 10 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಶಿವರಾತ್ರಿ ಪಾದಯಾತ್ರೆಗಳಾದ ಹಾಸನದ ಅರ್ಜುನ್ ಕುಮಾರ್(29), ಧನರಾಜ್(16) ಹಾಗೂ ಟಿ.ಟಿ ಪ್ರಯಾಣಿಕರಾದ ದಿಲೀಪ್(19), ವಿಶ್ವನಾಥ(18),ಲಾವಣ್ಯ(18), ಐಶ್ವರ್ಯಾ(21), ಶ್ರೇಯಾ(18), ಯಕ್ಷಿತ್(21), ಯತೀಶ್ (21), ಅನನ್ಯಾ(19) ಹಾಗೂ ಚಾಲಕ ರಾಜೇಶ್(32) ಎಂದು ಗುರುತಿಸಲಾಗಿದೆ.

ಗಾಯಾಳುಗಳನ್ನು ಕಕ್ಕಿಂಜೆ ಹಾಗೂ ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಟೀಲು ಪರಿಸರದ ಚೆಂಡೆ ಕಲಾವಿದರ ತಂಡ ಚಿಕ್ಕಮಗಳೂರಿನಲ್ಲಿ ಕಾರ್ಯಕ್ರಮ ಮುಗಿಸಿ ಹಿಂದಿರುವಾಗ ಅಪಘಾತ ಸಂಭವಿಸಿದೆ. ಕೊಟ್ಟಿಗೆಹಾರ ಕಡೆಯಿಂದ ಪ್ರತಿವರ್ಷದಂತೆ ಈ ಬಾರಿಯೂ ಆಗಮಿಸುತ್ತಿರುವ ಶಿವರಾತ್ರಿ ಪಾದಯಾತ್ರಿಗಳಿಗೆ ಡಿಕ್ಕಿ ಹೊಡೆದ ಟೆಂಪೋ ಟ್ರಾವೆಲರ್ ಬಳಿಕ ಕಂದಕಕ್ಕೆ ನುಗ್ಗಿ ಬೆಟ್ಟಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ವಾಹನಲ್ಲಿದ್ದ 10 ಜನರಿಗೆ ಗಾಯಗಳಾಗಿವೆ. ಈ ಘಟನೆ ಕುರಿತು ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Posts

Leave a Comment