Home Kannada ಬ್ಯಾಂಕ್​ನ ಸಿಡಿಎಂ ಯಂತ್ರಕ್ಕೆ ನಕಲಿ ನೋಟು ಡೆಪಾಸಿಟ್ ಮಾಡಿದ ಭೂಪ!

ಬ್ಯಾಂಕ್​ನ ಸಿಡಿಎಂ ಯಂತ್ರಕ್ಕೆ ನಕಲಿ ನೋಟು ಡೆಪಾಸಿಟ್ ಮಾಡಿದ ಭೂಪ!

by Eha

ಮಂಗಳೂರು: ನಗರದ ಕಂಕನಾಡಿ ಬ್ರ್ಯಾಂಚ್​ನ ಫೆಡರಲ್ ಬ್ಯಾಂಕ್​ನ ಸಿಡಿಎಂ ಯಂತ್ರಕ್ಕೆ ನಕಲಿ ನೋಟ್ ಡೆಪಾಸಿಟ್ ಮಾಡಿರುವ ವ್ಯಕ್ತಿಯ ಮೇಲೆ ದೂರು ದಾಖಲಾಗಿದೆ. ಫೆಡರಲ್ ಬ್ಯಾಂಕ್​ನ ಮೂಡುಬಿದಿರೆ ಶಾಖೆಯ ಖಾತೆ ಹೊಂದಿರುವ ಅಬ್ದುಲ್ ಯುವೇಶ್ ಎಂಬಾತ ನಕಲಿ ನೋಟುಗಳನ್ನು ಡೆಪಾಸಿಟ್ ಮಾಡಿದ್ದಾನೆ.

ಅಬ್ದುಲ್ ಯುವೇಶ್ ಫೆಡರಲ್ ಬ್ಯಾಂಕ್​ನ ಸಿಡಿಎಂ ಯಂತ್ರಕ್ಕೆ 2 ಸಾವಿರ ರೂ.‌ ಹಾಗೂ 500 ರೂ. ಮುಖಬೆಲೆಯ 31,500 ರೂ.ವನ್ನು ನಕಲಿ ನೋಟುಗಳನ್ನು ಡೆಪಾಸಿಟ್ ಮಾಡಿದ್ದ. ಆದರೆ ಮರುದಿನ ಸಿಡಿಎಂ ಯಂತ್ರ ಸ್ಥಗಿತಗೊಂಡ ಕಾರಣ ಪರಿಶೀಲನೆ ನಡೆಸಿದಾಗ ಯಂತ್ರದೊಳಗೆ ಹಣವಿರುವ ಸ್ಥಳದಲ್ಲಿ 2 ಸಾವಿರ ರೂ.‌ ನ 15 ನೋಟುಗಳು ಹಾಗೂ 500 ರೂ. ಮುಖಬೆಲೆಯ ನೋಟೊಂದು ಸ್ಥಗಿತಗೊಂಡಿತ್ತು. ಈ ನೋಟುಗಳನ್ನು ಹೊರತೆಗೆದು ಪರಿಶೀಲನೆ ಮಾಡಿದಾಗ 2 ಸಾವಿರದ 15 ನೋಟುಗಳು ನಕಲಿ ಎಂಬುದು ಗೊತ್ತಾಗಿದೆ. ಈ ಬಗ್ಗೆ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Related Posts

Leave a Comment