Home Kannada ಭಾಯಂದರ್,ಛತ್ರಪತಿ ಶಿವಾಜಿ ಜನ್ಮ ದಿನೋತ್ಸವಾಚರಣೆ.ಮಹಾಮಾರಿ ಕೊರೊನಾ ಮುಂಜಾಗ್ರತೆ ಅಗತ್ಯ… ರಾಜೇಶ್ ವೆತೋಸ್ಕರ್.

ಭಾಯಂದರ್,ಛತ್ರಪತಿ ಶಿವಾಜಿ ಜನ್ಮ ದಿನೋತ್ಸವಾಚರಣೆ.ಮಹಾಮಾರಿ ಕೊರೊನಾ ಮುಂಜಾಗ್ರತೆ ಅಗತ್ಯ… ರಾಜೇಶ್ ವೆತೋಸ್ಕರ್.

by Eha

ವರದಿ: ಉಮೇಶ್ ಕೆ.ಅಂಚನ್ ಮಾ.31. ಹಿಂದಿ ಸ್ವರಾಜ್ಯ ಸಂಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜರ ತಿಥಿಗಾನುಸಾರವಾಗಿ ಜನ್ಮ ದಿನಾಚರಣೆಯನ್ನು ಕೊರೊನಾ ಮ‌ಹಾಮಾರಿಯ ಸಮಯದ ನಿಯಮದಂತೆ ಸಾಂಕೇತಿಕವಾಗಿ ಆಚರಣೆ ಮಾಡುವಂತಾಗಿದೆ. ಕೊರೊನಾ ಮಹಾಮಾರಿಯ ಮುಂಜಾಗ್ರತೆ ವಹಿಸಿ ನಾವೆಲ್ಲರೂ ಮಾಸ್ಕ್ ಧರಿಸಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಇತರರಿಗೂ ತಿಳಿಯ ಪಡಿಸಿ ಆರೋಗ್ಯವನ್ನು ಕಾಪಾಡಬೇಕು. ದೇವರು ನಮಗೆಲ್ಲರಿಗೂ ರಕ್ಷಣೆ ನೀಡಿ ಕಾಪಾಡಲಿ ಎಂದು ಮಂಥನ ಸಾಮಾಜ ಸೇವಾ ಸಂಸ್ಥೆಯ ಅದ್ಯಕ್ಷ ಹಾಗೂ ಮೀರಾಭಾಯಂದರ್ ಪ್ರಭಾಗ 3ರ ಶಿವಸೇನೆಯ ಉಪ ಶಹರ ಪ್ರಮುಖ ರಾಜೇಶ್ ವೆತೋಸ್ಕರ್ ಹೇಳಿದರು. ಅವರು ಮಾ.31ರಂದು ಅವರ ನವಘರ್ ಸರಸ್ವತೀ ನಗರದ ಜನಸಂಪರ್ಕ ಕಛೇರಿಯ ಆವರಣದಲ್ಲಿ ಶಿವಾಜಿ ಮಹಾರಾಜರ ಪ್ರತಿಮೆಗೆ ಪೂಜೆ ಸಲ್ಲಿಸಿ ಮಾತನಾಡುತ್ತಿದ್ದರು. ಪ್ರೊಫೆಸರ್ ಸಿಂಗ್ ಹಾಗೂ ಭಾಯಂದರ್ ಹೋಲೀ ಏಂಜಲ್ಸ್ ಇಂಗ್ಲಿಷ್ ಶಾಲಾ ಪ್ರಭಂದಕ ಸದಾನಂದ್ ಸಾಲ್ಯಾನ್ ಶಿವಾಜಿ ಜಯಂತಿ ಮಹತ್ವದ ಬಗ್ಗೆ ಮಾತನಾಡಿದರು. ಸುನಿಲ್ ಸಾಲ್ವಿ, ಸುರೇಂದ್ರ ಕಾರ್ಣಿಕ್, ಕುಮಾರ್ ಪೂಜಾರಿ, ಬಿವಾ ಮಾನೆ, ಶ್ರೀಧರ್ ಬಿರಾಡ್ಕರ್, ರೇಷ್ಮಾ ಕಾವಡೇ, ಸಾಧನಾ ಚಕ್ರವರ್ತಿ, ಸ್ವಾತಿ ಧುರೇ ಹಾಗೂ ಮಂಥನ ಸಂಸ್ಥೆಯ ಸದಸ್ಯರು, ಸದಸ್ಯೆಯರು, ಪರಿಸರದ ತುಳುಕನ್ನಡಿಗರು ಉಪಸ್ಥಿತರಿದ್ದರು.ಸಂಜಯ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

Related Posts

Leave a Comment