Home Kannada ಭಾಯಂದರ್ ಮಂಥನ್ ಸಮಾಜಿಕ ಸಂಸ್ಥೆಯ ವತಿಯಿಂದ ಆರೋಗ್ಯ ತಪಾಸನಾ ಶಿಬಿರ ಚಿತ್ರ, ವರದಿ: ಉಮೇಶ್. ಕೆ.ಅಂಚನ್.

ಭಾಯಂದರ್ ಮಂಥನ್ ಸಮಾಜಿಕ ಸಂಸ್ಥೆಯ ವತಿಯಿಂದ ಆರೋಗ್ಯ ತಪಾಸನಾ ಶಿಬಿರ ಚಿತ್ರ, ವರದಿ: ಉಮೇಶ್. ಕೆ.ಅಂಚನ್.

by akash

ಭಾಯಂದರ್, ಸೆ.2 : ಭಾಯಂದರ್ ಪೂರ್ವದ ಮಂಥನ್ ಸಮಾಜಿಕ ಸೇವಾ ಸಂಸ್ಥೆಯ ವತಿಯಿಂದ ಉಚಿತ ಆರೋಗ್ಯ ತಪಾಸನೆಯ ಶಿಬಿರವು ಮಂಗಳವಾರ ಸಪ್ಟಂಬರ್ ಒಂದರಂದು ನವಘರ್ ರಸ್ತೆಯ ಸಾಯಿಪಾರ್ಕ್ ವಸತಿ ಸಂಕೀರ್ಣದ ಆವರಣದಲ್ಲಿ ಸಾಯಂಕಾಲ 4 ಗಂಟೆಯಿಂದ ರಾತ್ರಿ 9 ಗಂಟೆಯ ತನಕ ನಡೆಯಿತು. ಸ್ಥಳೀಯ ಶಾಸಕ ಪ್ರತಾಪ್ ಸರ್ನಾಯಕ್ ರವರ ಮಾರ್ಗದರ್ಶನದಲ್ಲಿ ಹಾಗೂ ವಾರ್ಡ್ ನಂಬ್ರ ಮೂರರ ಶಿವಸೇನಾ ಶಾಖೆಯ ಸಂಪೂರ್ಣ ಸಹಕಾರದೊಂದಿಗೆ ಮಂಥನ್ ಸಾಮಾಜಿಕ ಸಂಸ್ಥೆಯ ಅದ್ಯಕ್ಷ, ಸಮಾಜ ಸೇವಕ ರಾಜೇಶ್ ವೆತೋಸ್ಕರ್ ರವರ ಮುಂದಾಳತ್ವದಲ್ಲಿ ನಡೆದ ಈ ಶಿಬಿರದಲ್ಲಿ ತುಳು ಕನ್ನಡಿಗರ ಸಮೇತ ಸುಮಾರು 297 ಮಂದಿ ತಪಾಸನೆಯಲ್ಲಿ ಭಾಗವಹಿಸಿ ಪ್ರಯೋಜನ ಪಡೆದರು. ಮುಬಯಿ, ನಾಲಸೊಪರಾದ ರಿಯಲೇಬಲ್ ಪೆಥೋಲಜೀ ಲ್ಯಾಬ್ ಮತ್ತು ತಾವಡೇ ಒಪ್ಟಿಕಲ್ಸಿನ ಸಿಬ್ಬಂದಿಗಳು ದೇಹ ಸಮಸ್ಯೆಗಳ ತಪಾಸನೆ ಮತ್ತು ಕಣ್ಣಿನ ತಪಾಸನೆ ಮಾಡಿ ಪರಿಹಾರ ಸೂಚಿಸಿದರು. ವಾರ್ಡ್ ಕ್ರಮಾಂಕ ಮೂರರ ಶಿವಸೇನಾ ಶಾಖಾ ಅಧ್ಯಕ್ಷ ಶಶಿಕಾಂತ್ ನಾಯಕ್ ಮತ್ತು ಪದಾಧಿಕಾರಿಗಳು, ಸದಸ್ಯರು , ಮಂಥನ್ ಸಂಸ್ಥೆಯ ಸದಸ್ಯರಾದ ವೇಣುಗೋಪಾಲ್ ಪುತ್ರನ್, ಸುಜಾತಾ ಕೋಟ್ಯಾನ್, ಹರೀಶ್ ಪೂಜಾರಿ, ಸಂಜಯ್ ಭಾಯಿ, ಪ್ರದೀಪ್ ತಾವುಡೇ, ತಿಮ್ಮಪ್ಪ ಪೂಜಾರಿ ಮೊದಲಾದವರು ಉಪಸ್ಥಿತರಿದ್ದು ಶಿಬಿರದ ಯಶಸ್ಸಿಗೆ ಸಹಕರಿಸಿದ್ದರು.

Related Posts

Leave a Comment