Home Kannada ಭಾಯಂದರ್ ಶ್ರೀ ಅಯ್ಯಪ್ಪ ಆರಾಧನಾ ಭಕ್ತ ಮಂಡಲದ ವಿಜ್ರಂಭಣೆಯ 16ನೇ ವಾರ್ಷಿಕ ಅಯ್ಯಪ್ಪ ಮಹಾಪೂಜೆ ಸಂಪನ್ನ.

ಭಾಯಂದರ್ ಶ್ರೀ ಅಯ್ಯಪ್ಪ ಆರಾಧನಾ ಭಕ್ತ ಮಂಡಲದ ವಿಜ್ರಂಭಣೆಯ 16ನೇ ವಾರ್ಷಿಕ ಅಯ್ಯಪ್ಪ ಮಹಾಪೂಜೆ ಸಂಪನ್ನ.

by akash

ಚಿತ್ರ ವರದಿ:ಉಮೇಶ್ ಕೆ.ಅಂಚನ್. ಭಾಯಂದರ್ ಜ.9: ಭಾಯಿಂದರ್ ಪೂರ್ವದ ಶ್ರೀ ಅಯ್ಯಪ್ಪ ಆರಾಧನಾ ಭಕ್ತ ಮಂಡಲದ 16ನೇ ವಾರ್ಷಿಕ ಮಹಾಪೂಜೆಯು ಜ.8ರಂದು ನವಘರ್ ಫಾಟಕ್ ರಸ್ತೆಯ ಪೋಲಿಸ್ ಠಾಣಾ ಪಕ್ಕದ ನವ ಅಂಕಿತಾ ಅಪಾರ್ಟ್ಮೆಂಟಿನಲ್ಲಿರುವ ಮಂದಿರದ ವಠಾರದಲ್ಲಿ ನಡೆಯಿತು. ಸಾಯಂಕಾಲ 5 ಗಂಟೆಯಿಂದ ಆರಾಧನಾ ಫ್ರೆಂಡ್ಸ್ ಸದಸ್ಯೆಯರಿಂದ ಭಜನೆ ನಡೆದು 7 ಗಂಟೆಯಿಂದ ಮಂದಿರದ ಸುಧಾಕರ ಗುರುಸ್ವಾಮಿಯವರಿಂದ ಪಡಿಪೂಜೆ, ಶರಣುಘೋಷಣೆಯೊಂದಿಗೆ ಮಹಾಪೂಜೆ ಹಾಗೂ ಮಹಾಆರತಿ ನಡೆಯಿತು.ಜಗತ್ತಿಗೆ ಮಹಾಸಂಕಟವನ್ನು ಕೊಟ್ಟ ಕೊರೊನ ಮಹಾಮಾರಿಯು ದೂರವಾಗಿ ಸರ್ವ ಜನರಿಗೆ ಸುಖಶಾಂತಿ ಲಭಿಸಲಿ ಎಂದು ಪ್ರಾರ್ಥಿಸಲಾಯಿತು. ಶಿಬಿರದ ಸ್ವಾಮಿಗಳಾದ ಸದಾಶಿವ ಸ್ವಾಮಿ, ಕರುಣಾಕರ ಸ್ವಾಮಿ, ರಾಜೇಶ್ ಸ್ವಾಮಿ, ದೊರೆಯ್ ಸ್ವಾಮಿ, ಸನ್ಮಿತ್ ಸ್ವಾಮಿ, ಕೀರ್ತಿ ಸ್ವಾಮಿ, ಸಂಪತ್ ಸ್ವಾಮಿ ಹಾಗೂ ಪ್ರವೀಣ್ ಸ್ವಾಮಿ ಪೂಜಾಕಾರ್ಯದಲ್ಲಿ ಸಹಕರಿಸಿದ್ದರು. ಕೊನೆಗೆ ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ನಡೆಯಿತು. ಪೂಜಾಕಾರ್ಯದಲ್ಲಿ ಭಾಯಿಂದರ್ ನವಘರ್ ಪೋಲಿಸ್ ಠಾಣಾ ಹಿರಿಯ ಪೋಲಿಸ್ ಅಧಿಕಾರಿ ಮಿಲಿಂದ್ ದೇಸಾಯಿ, ಮೀರಾಭಾಯಿಂದರ್ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸಚ್ಚಿದಾನಂದ ಶೆಟ್ಟಿ ಮುನ್ನಲಾಯಿಗುತ್ತು,ಬಿಜೆಪಿ ನವಘರ್ ಮಂಡಲಾದ್ಯಕ್ಷ ಸತ್ಯೇಂದ್ರ ಶರ್ಮಾ, ಬಿಜೆಪಿ ಭಾಯಂದರ್ ನಾಯಕರಾದ ರಾಮ್ ಅಗರ್ವಾಲ್, ಸಂದೀಪ್ ಅಗರ್ವಾಲ್, ಭಾರತ್ ಬ್ಯಾಂಕಿನ ಭಾಯಿಂದರ್ ಶಾಖೆಯ ಪ್ರಭಂದಕ ಪ್ರವೀಣ್ ಪೂಜಾರಿ, ಸ್ಥಳೀಯ ನಗರಸೇವಕ ಧನೇಶ್ ಪಾಟೀಲ್ ,ಮೀರಾಭಾಯಿಂದರ್ ದಕ್ಷಿಣ ಭಾರತೀಯ ಶಿವಸೇನಾ ಘಟಕದ ಕಾರ್ಯಾದ್ಯಕ್ಷ ಚೇತನ್ ಶೆಟ್ಟಿ ಮೂಡಬಿದ್ರೆ, ಮೀರಾಭಾಯಿಂದರ್ ಹೋಟೆಲ್ ಎಸೋಸಿಯೇಶನಿನ ಅದ್ಯಕ್ಷ ಮಧುಕರ್ ಕೆ.ಶೆಟ್ಟಿ,ಬಂಟರ ಸಂಘದ ಕ್ರೀಡಾ ವಿಭಾಗದ ಕಾರ್ಯಾದ್ಯಕ್ಷ ಗಿರೀಶ್ ಶೆಟ್ಟಿ ತೆಳ್ಳಾರ್, ಬಂಟ್ಸ್ ಫೋರಮ್ ಮೀರಾಭಾಯಿಂದರಿನ ಗೌರವಾಧ್ಯಕ್ಷ ಸಂತೋಷ್ ರೈ ಬೆಳ್ಳಿಪಾಡಿ, ಉಪಾಧ್ಯಕ್ಷ ದಿವಾಕರ್ ಶೆಟ್ಟಿ,
ಬಿಲ್ಲವರ ಎಸೋಸಿಯೇಶನಿನ ಭಾಯಿಂದರ್ ಸ್ಥಳೀಯ ಕಛೇರಿಯ ಕಾರ್ಯಾದ್ಯಕ್ಷ ನರೇಶ್ ಕೆ.ಪೂಜಾರಿ, ಸಮಾಜ ಸೇವಕಿಯರಾದ ಸುಮಿತ್ರಾ ಕರ್ಕೇರ, ಉಷಾ ಕರ್ಕೇರ, ಕರ್ನಾಟಕ ಮಹಾಮಂಡಲದ ಉಪಾಧ್ಯಕ್ಷ ಸುಭಾಷ್ ಶೆಟ್ಟಿ, ಕಾರ್ಯದರ್ಶಿ ಪ್ರವೀಣ್ ಶೆಟ್ಟಿ ಉದ್ಯಮಿಗಳಾದ ರವಿ ಶೆಟ್ಟಿ , ಶರತ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ನಗರಸೇವಕ ಹಾಗೂ ಸಭಾಪತಿ ಗಣೇಶ್ ಶೆಟ್ಟಿ(ವಾರ್ಡ್ ನಂ.3), ಅಯ್ಯಪ್ಪ ಆರಾಧನಾ ಭಕ್ತ ಮಂಡಲದ ಅದ್ಯಕ್ಷ ಸುಕೇಶ್ ಶೆಟ್ಟಿ, ಗೌರವಾಧ್ಯಕ್ಷರಾದ ಅಶೋಕ್ ಶೆಟ್ಟಿ, ಪ್ರಮೋದ್ ಕೋಟ್ಯಾನ್, ರವಿಕಾಂತ್ ಶೆಟ್ಟಿ, ಜತೆಕಾರ್ಯದರ್ಶಿ ನವೀನ್ ಸುವರ್ಣ, ಕೋಶಾಧಿಕಾರಿ ನವೀನ್ ಶೆಟ್ಟಿ, ಜತೆ ಕೋಶಾಧಿಕಾರಿ ನಾರಾಯಣ ಸುವರ್ಣ, ಪೂಜಾ ಕಮಿಟಿಯ ಕಾರ್ಯಾದ್ಯಕ್ಷ ಉದಯ ಸುವರ್ಣ ಹಾಗೂ ಸದಸ್ಯರು ಆರಾಧನಾ ಫ್ರೆಂಡ್ಸಿನ ಗೌರವಾಧ್ಯಕ್ಷೆ ವನಿತಾ ಹೆಗ್ಡೆ, ಕಾರ್ಯಾದ್ಯಕ್ಷೆ ಪ್ರೇಮಾ ಹೆಗ್ಡೆ ಹಾಗೂ ಪದಾಧಿಕಾರಿಗಳಾದ ಸರೋಜಿನಿ ಪೂಜಾರಿ, ಪ್ರಮೀಳಾ ಶೆಟ್ಟಿ, ಸುಶೀಲಾ ಜಿ.ಶೆಟ್ಟಿ, ಶೈಲಜಾ ಪ್ರಮೋದ್ ಶೆಟ್ಟಿ, ಶಶಿಕಲಾ ಶೆಟ್ಟಿ, ಶೈಲಜಾ ಸುಧಾಕರ್ ಶೆಟ್ಟಿ, ಆಶಾ.ವಿ.ಶೆಟ್ಟಿ, ಶೋಭಾ ಶೆಟ್ಟಿ ಮತ್ತು ಸದಸ್ಯರು ಪೂಜಾಕಾರ್ಯದ ಯಶಸ್ಸಿಗೆ ಸಹಕರಿಸಿದ್ದರು. ಪರಿಸರದ ಉದ್ಯಮಿಗಳು, ಭಕ್ತರು ಕೋವಿಡ್ ನಿಯಮವನ್ನು ಪಾಲಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Related Posts

Leave a Comment

Translate »